×
Ad

ನಿರೀಕ್ಷೆ ಹುಸಿ ಮಾಡಿದ ಬಜೆಟ್: ಉಡುಪಿ ಜಿಲ್ಲಾ ಕಾಂಗ್ರೆಸ್

Update: 2022-02-01 20:24 IST

ಉಡುಪಿ : ಅನ್‌ ಬ್ಲೆಂಡೆಡ್ ತೈಲ ಮೇಲೆ ಲೀ.2 ರೂ. ಸುಂಕ ಹೇರಿಕೆಯಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಲಿದೆ. ದುಡಿಯುವ ಮತ್ತು ಮಧ್ಯಮ ವರ್ಗಕ್ಕೆ ಯಾವುದೇ ಯೋಜನೆ ರೂಪಿಸಿಲ್ಲ. ಆದಾಯ ತೆರಿಗೆಯಲ್ಲಿ ವಿನಾಯಿತಿ ಇಲ್ಲದೆ ಯಥಾಸ್ಥಿತಿಯನ್ನು ಕಾಯ್ದುಕೊಂಡಿರುವುದು ಮಧ್ಯಮ ವರ್ಗವನ್ನು ನಿರಾಶೆಗೊಳಿಸಿದೆ. ಆಹಾರ ಭದ್ರತೆ ಮೇಲಿನ ಅನುದಾನ ಇಳಿಕೆ, ಒಂದೆಡೆ ಡಿಜಿಟಲ್‌ಗೆ ಉತ್ತೇಜನ ನೀಡುತ್ತಾ ಇನ್ನೊಂದೆಡೆ ಡಿಜಿಟಲ್ ಸೇವೆಗಳಿಗೆ ತೆರಿಗೆ ಹೇರಿಕೆ ಸರಕಾರದ ಗೊಂದಲಕ್ಕೆ ಸಾಕ್ಷಿ. ಸರಕಾರಿ ಸಂಸ್ಥೆಗಳ ಬಂಡವಾಳ ಹಿಂದೆಗೆತ ಹಾಗೂ ಹಲವಾರು ಯೋಜನೆಗಳಿಗೆ ಅನುದಾನ ಕಡಿತ ಮಾಡಲಾಗಿದೆ. ಬಜೆಟ್‌ನಲ್ಲಿ ರಾಜ್ಯಕ್ಕೆ ಯಾವುದೇ ಕೊಡುಗೆ ನೀಡದೆ ದಕ್ಷಿಣ ಭಾರತವನ್ನೇ ಕಡೆಗಣಿಸಲಾಗಿದೆ. ಅಭಿವೃದ್ಧಿಗೆ ಪೂರಕವಾಗಿ ಯಾವುದೇ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಜನೋಪಯೋಗಿ ವಸ್ತುಗಳ ಮೇಲಿನ ಸಬ್ಸಿಡಿ ಕಡಿತಗೊಳಿಸಿ ಜನರ ಮೇಲೆ ಹೆಚ್ಚಿನ ಹೊರೆ ಹೊರಿಸಿದಂತಾಗಿದೆ.

-ಅಶೋಕ್‌ ಕುಮಾರ್ ಕೊಡವೂರು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
-ಭಾಸ್ಕರ ರಾವ್ ಕಿದಿಯೂರು, ಜಿಲ್ಲಾ ಕಾಂಗ್ರೆಸ್ ವಕ್ತಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News