ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕ: ಶೋಭಾ ಕರಂದ್ಲಾಜೆ
Update: 2022-02-01 21:17 IST
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಬಜೆಟ್ ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಬಜೆಟ್ ಆಗಿದೆ. ಇದು ಮುಂದಿನ 25 ವರ್ಷಗಳ ಭವ್ಯ ಭಾರತದ ಅಭಿವೃದ್ಧಿ ಪುಟಗಳು. ಹಾಗೂ ಭಾರತ ದೇಶಕ್ಕೆ ಇಂದು ಅಮೃತಕಾಲವಾಗಿದೆ. ಬಜೆಟ್‌ನಲ್ಲಿ ಕೃಷಿ ಮತ್ತು ರೈತರ ಸಚಿವಾಲಯಕ್ಕೆ ಒಟ್ಟು ಅಂದಾಜು 1,32,474.37 ಕೋಟಿ ರೂ.ಗಳನ್ನು ನೀಡಲಾಗಿದೆ.
ಈ ಆರ್ಥಿಕ ವರ್ಷದಲ್ಲಿ 1208 ಲಕ್ಷ ಮೆಟ್ರಿಕ್ ಟನ್ ಗೋಧಿ ಹಾಗೂ ಭತ್ತವನ್ನು 1.63 ಕೋಟಿ ರೈತರಿಂದ ಖರೀದಿಸಿ ಇದಕ್ಕಾಗಿ 2.37 ಲಕ್ಷ ಕೋಟಿ ರೂ.ಗಳನ್ನು ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ನೇರವಾಗಿ ರೈತರ ಖಾತೆಗೆ ಪಾವತಿಸಲಾಗುವುದು.
-ಶೋಭಾ ಕರಂದ್ಲಾಜೆ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ