×
Ad

ಹೊಳೆಗೆ ಬಿದ್ದು ಮೃತ್ಯು

Update: 2022-02-01 21:41 IST

ಬೈಂದೂರು, ಫೆ.1: ಹೊಳೆಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜ.31ರಂದು ಮಧ್ಯಾಹ್ನ ವೇಳೆ ಪಡುವರಿ ಗ್ರಾಮದಲ್ಲಿ ನಡೆದಿದೆ.ಮೃತರನ್ನು ಹುಣ್ಸೆಮನೆ ನಿವಾಸಿ ಮಂಜಯ್ಯ ದೇವಾಡಿಗ(61) ಎಂದು ಗುರುತಿಸಲಾಗಿದೆ.

ಕೆಲಸಕ್ಕೆಂದು ಹೋದ ಇವರು ಕೆಲಸವಿಲ್ಲದ ಕಾರಣ ವಾಪಾಸ್ಸು ಮನೆಗೆ ಬರಲು ಪಡುವರಿ ಗ್ರಾಮದ ಸುಮನಾವತಿ ಹೊಳೆಯನ್ನು ದಾಟುತ್ತಿದ್ದರು. ಈ ವೇಳೆ ಆಯತಪ್ಪಿ ಕಾಲು ಜಾರಿ ಹೊಳೆಗೆ ಬಿದ್ದ ಇವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News