ಸಂಸತ್ತಿನಲ್ಲಿ ಹಿಂದಿಯಲ್ಲಿ ಉತ್ತರಿಸಿದ ಜ್ಯೋತಿರಾದಿತ್ಯ ಸಿಂಧಿಯಾಗೆ ಶಶಿ ತರೂರ್‌ ತರಾಟೆ

Update: 2022-02-03 15:27 GMT
ಜ್ಯೋತಿರಾದಿತ್ಯ ಸಿಂಧಿಯಾ / ಶಶಿ ತರೂರ್‌ (File Photo: PTI)

ಹೊಸದಿಲ್ಲಿ: ಸಂಸತ್ತಿನಲ್ಲಿ ಇಂಗ್ಲಿಷಿನಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ವಾಯುಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹಿಂದಿಯಲ್ಲಿ ಉತ್ತರಿಸಿರುವುದಕ್ಕೆ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಹಿಂದಿಯಲ್ಲಿ ಉತ್ತರಿಸಿರುವುದನ್ನು “ಅವಮಾನ” ಎಂದು ಬಣ್ಣಿಸಿರುವ ತರೂರ್‌, ದಯವಿಟ್ಟು ಹಿಂದಿಯಲ್ಲಿ ಉತ್ತರಿಸಬೇಡಿ, ಇದು ಜನರಿಗೆ ಮಾಡುತ್ತಿರುವ ಅವಮಾನ ಎಂದು ಹೇಳಿದ್ದಾರೆ. 

ತಮಿಳುನಾಡಿನ ಸಂಸದರೊಬ್ಬರು ಇಂಗ್ಲೀಷಿನಲ್ಲಿ ಕೇಳಿದ ಪ್ರಶ್ನೆಗೆ ಸಿಂಧಿಯಾ ಹಿಂದಿಯಲ್ಲಿ ಉತ್ತರಿಸಿದ್ದಾರೆ. ಇದು ತರೂರ್‌ ಆಕ್ರೋಶಕ್ಕೆ ಕಾರಣವಾಗಿದೆ. 

ಸಚಿವರು ಇಂಗ್ಲೀಷಿನಲ್ಲಿ ಮಾತನಾಡಲಿ, ಅವರು ಇಂಗ್ಲೀಷಿನಲ್ಲೇ ಉತ್ತರಿಸಲಿ ಎಂದು ತರೂರ್‌ ಆಗ್ರಹಿಸಿದ್ದಾರೆ. 

ಇದರಿಂದ ಇರುಸು-ಮುರಿಸುಗೊಳಗಾದ ಸಿಂಧಿಯಾ, ತರೂರ್‌ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. 

ತಕ್ಷಣವೇ ಮಧ್ಯಪ್ರವೇಶಿಸಿದ ಸ್ಪೀಕರ್‌ ಓಮ್‌ ಬಿರ್ಲಾ, ಇದು (ಹಿಂದಿಯಲ್ಲಿ ಉತ್ತರಿಸುವುದು) ಅವಮಾನವಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಿ.ಎಂ ಇಬ್ರಾಹೀಂ ಎಲ್ಲೇ ಇದ್ದರೂ ನನ್ನ ಸ್ನೇಹಿತ ಎಂದ ಸಿದ್ದರಾಮಯ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News