ಪಂಜಾಬ್: ಪಾಕಿಸ್ತಾನದ ನುಸುಳುಕೋರನ ಹತ್ಯೆ
Update: 2022-02-03 21:45 IST
ಫಿರೋಝ್‌ಪುರ, ಫೆ. 3: ಪಂಜಾಬ್‌ನ ಫಿರೋಝ್‌ಪುರ ಜಿಲ್ಲೆಯ ಅಂತರ್‌ರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ನುಸುಳುಕೋರನನ್ನು ಗುಂಡು ಹಾರಿಸಿ ಹತ್ಯೆಗೈಯಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಫೆಬ್ರವರಿ 2 ಹಾಗೂ 3ರ ನಡುವಿನ ರಾತ್ರಿ ಗಡಿಯಲ್ಲಿ ಕೆಲವು ಅನುಮಾನಾಸ್ಪದ ಚಲನವಲನವನ್ನು ಗಡಿ ಭದ್ರತಾ ಪಡೆ ಗುರುತಿಸಿತು ಹಾಗೂ ಜಾಗೃತಗೊಂಡಿತು. ನುಸುಳುಕೋರನಿಗೆ ಬಿಎಸ್‌ಎಫ್ ಸವಾಲು ಹಾಕಿತು. ಆದರೆ, ಆತ ನುಸುಳುವುದನ್ನು ನಿಲ್ಲಿಸಲಿಲ್ಲ. ಬೆದರಿಕೆಯ ಬಗ್ಗೆ ಜಾಗೃತವಾದ ಬಿಎಸ್‌ಎಫ್ ಸಿಬ್ಬಂದಿ ಗುಂಡು ಹಾರಿಸಿದರು. ಪರಿಣಾಮ ನುಸುಳುಕೋರ ಸ್ಥಳದಲ್ಲೇ ಮೃತಪಟ್ಟ ಎಂದು ಅದು ತಿಳಿಸಿದೆ.
ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಬಿಎಸ್‌ಎಫ್ ಹೇಳಿದೆ.