×
Ad

ಮಾನವ ಹಕ್ಕು ಸಂವಿಧಾನದಡಿ ಮೂಲಭೂತ ಹಕ್ಕು: ನ್ಯಾ.ಆರ್. ನಟರಾಜ್

Update: 2022-02-05 19:39 IST

ಉಡುಪಿ, ಫೆ.5: ಪ್ರತಿಯೊಬ್ಬ ವ್ಯಕ್ತಿ ಜೀವಿಸುವ ಹಕ್ಕು ಸೇರಿದಂತೆ ಹಲವಾರು ಮಾನವ ಹಕ್ಕುಗಳನ್ನು ಹೊಂದಿ ದ್ದಾನೆ. ಈ ಮಾನವ ಹಕ್ಕುಗಳನ್ನು ನಮ್ಮ ಸಂಧಾನದ ಅಡಿಯಲ್ಲಿ ಮೂಲಭೂತ ಹಕ್ಕುಗಳೆಂದು ಪರಿಗಣಿಸ ಲಾಗಿದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾಯಮೂರ್ತಿ ರಂಗಸ್ವಾಮಿ ನಟರಾಜ್ ಹೇಳಿದ್ದಾರೆ.

ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಈ ವರ್ಷದ ವಿದ್ಯಾರ್ಥಿ ಸಂಘವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಈ ಹಕ್ಕುಗಳಿಗೆ ಸರಕಾರದಿಂದ ತೊಂದರೆ ಉಂಟಾದಾಗಲೆಲ್ಲಾ ನಾನೀ ಪಾಲ್ಕಿವಾಲರಂತಹ ಮಹಾನ್ ವಕೀಲರು ಕಾಲಕಾಲಕ್ಕೆ ನ್ಯಾಯಾಲಯದಲ್ಲಿ ದಾವೆ ಹೂಡಿ ಈ ಮೂಲಭೂತ ಹಕ್ಕುಗಳನ್ನು ರಕ್ಷಿಸಿದ್ದಾರೆ ಎಂದು ಅವರು ವಿವರಿಸಿರು.

ವಕೀಲ ವೃತ್ತಿಯಲ್ಲಿ ಸಮಾಜಮುಖಿಯಾದ ಹಾಗೂ ಬಡವರ ಪರ ನ್ಯಾಯ ಕ್ಕಾಗಿ ಹೋರಾಡುವ ಅವಕಾಶವಿದ್ದು, ಕಾನೂನು ವಿದ್ಯಾರ್ಥಿಗಳು ಕಲಿಕೆಯ ಹಂತದಿಂದಲೇ ಒಳ್ಳೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಡವರ ಪರ ಹೋರಾಟ ನಡೆಸಬೇಕೆಂದು ಕಾನೂನು ವಿದ್ಯಾರ್ಥಿಗಳಿಗೆ ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸುಬ್ರಮಣ್ಯಜೆ.ಎನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದ್ದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಡಾ. ನಿರ್ಮಲ ಕುಮಾರಿ ಕೆ. ಅಧ್ಯಕ್ಷತೆ ವಹಿಸಿದ್ದರು.

ಕಾಲೇಜಿನ ಪೋಷಕ- ಶಿಕ್ಷಕರ ಸಂಘದ ಅಧ್ಯಕ್ಷರಾದ ವಿಜೇತ ಪೈ, ಸಾಂಸ್ಕೃತಿಕ ಕ್ಲಬ್‌ನ ಸಂಯೋಜಕಿ ಪ್ರೀತಿ ಹರೀಶ್‌ರಾಜ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸಂಪತ್ ಕುಮಾರ್ ಮತ್ತು ಮುರಳೀಧರ್ ಪೈ, ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿವಿಧ ಕ್ಲಬ್‌ಗಳ ಕಾರ್ಯದರ್ಶಿಗಳು ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ದೀಪಿಕಾ ಸ್ವಾಗತಿಸಿ, ಪವಿತ್ರ ವಂದಿಸಿದರು. ಭವ್ಯ ಅತಿಥಿಗಳನ್ನು ಪರಿಚಯಿಸಿ ದರು ಹಾಗೂ ಸುಕೃತ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News