×
Ad

ಲೋಕಾಅದಾಲತ್ ಯಶಸ್ವಿಗೆ ವಕೀಲರ ಸಹಕಾರ ಅಗತ್ಯ: ನ್ಯಾ.ನಟರಾಜ್

Update: 2022-02-05 20:06 IST

ಉಡುಪಿ, ಫೆ.5: ನಿರಂತರವಾಗಿ ನಡೆಯುವ ಲೋಕಾ ಅದಾಲತ್‌ಗೆ ವಕೀಲರು ಸಹಕಾರ ನೀಡಿದರೆ ಮಾತ್ರ ಉತ್ತಮವಾಗಿ ಮುಂದುವರೆಯಲು ಸಾಧ್ಯವಾಗುತ್ತದೆ. ಆದುದದಿಂದ ವಕೀಲರು ಸಾಧ್ಯವಿರುವಷ್ಟು ಲೋಕ ಅದಾ ಲತ್‌ಗೆ ಸ್ಪಂದಿಸಿ ಹೆಚ್ಚು ಪ್ರಕರಣಗಳನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಲು ಸಹಕಾರ ನೀಡಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ನೂತನ ಆಡಳಿತಾತ್ಮಕ ನ್ಯಾಯಮೂರ್ತಿ ಆರ್.ನಟರಾಜ್ ಹೇಳಿದ್ದಾರೆ.

ಉಡುಪಿ ನ್ಯಾಯಾಲಯಗಳ ಸಂಕೀರ್ಣದಲ್ಲಿರುವ ವಕೀಲರ ಸಂಘಕ್ಕೆ ಶನಿವಾರ ಭೇಟಿ ನೀಡಿ ಅವರು ಮಾತನಾಡುತ್ತಿದ್ದರು. ರಾಜ್ಯ ಎಲ್ಲ ನ್ಯಾಯಾ ಲಯಗಳಿಗೆ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಲು ಯೋಜನೆ ರೂಪಿಸಲಾಗಿದ್ದು, ಅದರಂತೆ ಉಡುಪಿ ಜಿಲ್ಲೆಯ ನ್ಯಾಯಾಲಯಕ್ಕೂ ಎಲ್ಲ ರೀತಿಯ ಸೌಲಭ್ಯಗಳು ಸಿಗುವ ರೀತಿಯಲ್ಲಿ ಪ್ರಯತ್ನ ಗಳನ್ನು ಮಾಡಲಾಗು ವುದು. ನ್ಯಾಯಾಲಯಗಳಲ್ಲಿ ಆಧುನೀಕರಣ ವ್ಯವಸ್ಥೆ ಮತ್ತು ವಿವಿಧ ಯೋಜನೆ ಗಳ ಅನುಷ್ಠಾನಕ್ಕೆ ಬೇಕಾದ ಚಿಂತನೆಗಳನ್ನು ವಕೀಲರು ನೀಡಬೇಕು. ಅದೇ ರೀತಿ ಕೋರ್ಟ್‌ನಲ್ಲಿ ಹೊಸ ಹೊಸ ನಡವಳಿಗಳಿಗೆ ವಕೀಲರು ಸಹಕಾರ ನೀಡಬೇಕು. ಹೀಗೆ ಜನರ ಕಣ್ಣೀರು ಒರೆಸುವ ಪ್ರಯತ್ನ ಮಾಡಬೇಕು ಎಂದರು.

ವಕೀಲರು ಇಲ್ಲದೆ ಯಾವುದೇ ಕೋರ್ಟ್ ನಡೆಯುವುದಿಲ್ಲ. ಅವರಿಗೆ ಎಲ್ಲ ರೀತಿಯ ಸೌಲಭ್ಯ ನೀಡಿದರೆ ಮಾತ್ರ ಕೋರ್ಟ್ ಉತ್ತಮವಾಗಿ ಮುಂದುವರೆ ಯಲು ಸಾಧ್ಯ.ಉಡುಪಿಯಲ್ಲಿ ವಕೀಲರ ಭವನ ನಿರ್ಮಾಣಕ್ಕೆ ಬೇಡಿಕೆ ಇದ್ದು, ಇಲ್ಲಿನ ಹಳೆ ಕಟ್ಟಡ ಕೆಡವಿ ನಾಲ್ಕು ಮಹಡಿಯ ಹೊಸ ಸಂಕೀರ್ಣ ನಿರ್ಮಿಸುವ ಯೋಜನೆ ಇದೆ. ಇದರಲ್ಲಿ ವಕೀಲರಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಿ ಕೊಡಲಾಗುವುದು. ಅದೇರೀತಿ ಮಲ್ಟಿ ಕಾರು ಪಾರ್ಕಿಂಗ್ ಕಟ್ಟಡವನ್ನು ಕೂಡ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್. ವಹಿಸಿದ್ದರು. ಫೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಕಲ್ಪನಾ ಎರ್ಮಾಳ್, ಅರ್ಚನಾ ನಾಗರಾಜ್ ಉಪಸ್ಥಿತರಿದ್ದರು.

ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್ ಸ್ವಾಗತಿಸಿದರು. ಪ್ರಧಾನ ಕಾರ್ಯ ದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ವಂದಿಸಿದರು. ನ್ಯಾಯವಾದಿ ರಾಜ ಶೇಖರ್ ಶ್ಯಾುರಾವ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News