ಫೆ.9ರಿಂದ ಉದರದರ್ಶಕ ಶಸ್ತ್ರಚಿಕಿತ್ಸ ಶಿಬಿರ

Update: 2022-02-05 17:22 GMT

ಮಂಗಳೂರು :ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಫೆ.9ರಿಂದ 26ರವರೆಗೆ ಜಿಲ್ಲೆಯ ತಾಲೂಕುಗಳಲ್ಲಿ ಉದರದರ್ಶಕ ಶಸ್ತ್ರಚಿಕಿತ್ಸ ಶಿಬಿರವನ್ನು ಆಯೋಜಿಸಲಾಗಿದೆ.

ನಗರದ ಲೇಡಿಗೋಷನ್ ಆಸ್ಪತ್ರೆಯ ವೈದ್ಯಡಾ.ದುರ್ಗಾಪ್ರಸಾದ್ ಹಾಗೂ ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಡಾ. ನವೀನ್ ಫೆ.9ರಂದು ಲೇಡಿಗೋಶನ್ ಆಸ್ಪತ್ರೆ, ಫೆ.19ರಂದು ಬೆಳ್ತಂಗಡಿ ತಾಲೂಕು ಆಸ್ಪತ್ರೆ, ಫೆ.22ರಂದು ಬಂಟ್ವಾಳ ತಾಲೂಕು ಆಸ್ಪತ್ರೆ, ಫೆ.23ರಂದು ಮೂಡಬಿದಿರೆ ಸಮುದಾಯ ಆರೋಗ್ಯ ಕೇಂದ್ರ, ಫೆ.25ರಂದು ಪುತ್ತೂರು ತಾಲೂಕು ಆಸ್ಪತ್ರೆ, ಫೆ.26 ರಂದು ಸುಳ್ಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಉದರದರ್ಶಕ ಶಸ್ತ್ರಚಿಕಿತ್ಸೆ ನಡೆಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News