×
Ad

ಏಕದಿನ ಕ್ರಿಕೆಟಿಗೆ ದೀಪಕ್ ಹೂಡ ಪಾದಾರ್ಪಣೆ, ಮಾಜಿ ನಾಯಕ ವಿರಾಟ್ ಕೊಹ್ಲಿಯಿಂದ ಕ್ಯಾಪ್ ಸ್ವೀಕಾರ

Update: 2022-02-06 15:57 IST

ಅಹಮದಾಬಾದ್, ಫೆ.6: ವೆಸ್ಟ್ ಇಂಡೀಸ್ ವಿರುದ್ಧ ರವಿವಾರ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಆರಂಭಿಕ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಇದು ಭಾರತ ಆಡುತ್ತಿರುವ 1,000ನೇ ಏಕದಿನ ಪಂದ್ಯವಾಗಿದ್ದು, ಭಾರತವು ಕ್ರಿಕೆಟ್ ಇತಿಹಾಸದಲ್ಲಿ1,000ನೇ ಪಂದ್ಯ ಆಡುತ್ತಿರುವ  ಮೊದಲ ತಂಡವಾಗಿದೆ. ಭಾರತದ ಐತಿಹಾಸಿಕ  ಪಂದ್ಯದಲ್ಲಿ  ದೀಪಕ್ ಹೂಡಾ ಚೊಚ್ಚಲ ಪಂದ್ಯ ಆಡಿದ ಭಾರತದ 243 ನೇ ಆಟಗಾರರಾದರು, ಮಾಜಿ ನಾಯಕ ಹಾಗೂ  ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರಿಂದ ಭಾರತದ ಕ್ಯಾಪ್ ಸ್ವೀಕರಿಸಿದರು.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೂಡಾ ಅವರ ಕ್ಯಾಪ್ ಅನ್ನು ಪಡೆದ ವೀಡಿಯೊವನ್ನು ಹಂಚಿಕೊಂಡಿದೆ, ಅವರ ಸುತ್ತಲಿನ ಸಹ ಆಟಗಾರರು ಭಾರತದ ಹೊಸ ಆಟಗಾರನನ್ನು ಅಭಿನಂದಿಸಿದ್ದಾರೆ.

ಗಾಯದಿಂದ ಸಂಪೂರ್ಣ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕಳೆದುಕೊಂಡ ನಂತರ ರೋಹಿತ್ ಸ್ವತಃ ತಂಡಕ್ಕೆ ಮರಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News