×
Ad

ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸಂಖ್ಯಾಶಾಸ್ತ್ರ ರಾಜ್ಯಮಟ್ಟದ ಸಮ್ಮೇಳನ

Update: 2022-02-08 22:01 IST

ಉಡುಪಿ, ಫೆ.8: ಸಂಖ್ಯಾಶಾಸ್ತ್ರದ ತತ್ತ್ವವು ಉಳಿದ ಜ್ಞಾನ ವಿಷಯಗಳಿಗಿಂತ ಭಿನ್ನವಾಗಿದೆ. ಗಣಕ ಕ್ಷೇತ್ರದಲ್ಲಿ ನೂತನ ಸಾಫ್ಟ್‌ವೇರ್‌ಗಳ ಅನ್ವೇಷಣೆಯಲ್ಲಿ ಇದರ ಪಾತ್ರ ಅಪಾರವಾಗಿದೆ ಎಂದು ಉಡುಪಿ ಶ್ಯಾಮಿಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಜ್‌ ಮೋಹನ್ ಹೇಳಿದ್ದಾರೆ.

ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗವು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಯ ಪ್ರಾಯೋಜಕತ್ವದಲ್ಲಿ ಆಯೋಜಿಸಿದ್ದ ವಿಜ್ಞಾನದಲ್ಲಿ ಸಂಖ್ಯಾಶಾಸ್ತ್ರೀಯ ಸಂಶೋಧನೆ ಎಂಬ ವಿಷಯದ ಕುರಿತ ಎರಡು ದಿನಗಳ ರಾಜ್ಯಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಖ್ಯಾಶಾಸ್ತ್ರದ ಅರಿವಿನಿಂದ ಮಾತ್ರ ಸಂಶೋಧನೆಯ ವಿಶ್ಲೇಷಣೆ ಸಾಧ್ಯ ಎಂದು ಡಾ.ಜಿ.ಎಸ್. ಚಂದ್ರಶೇಖರ್ ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ರಾಘವೇಂದ್ರ ಎ. ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಡಾ. ಶ್ರೀಮತಿ ಮಯ್ಯ, ಡಾ. ವಾಣಿಲಕ್ಷ್ಮಿ ಮತ್ತು ನಿತಿನ್ ನಾಯಕ್ ಉಪಸ್ಥಿತರಿದ್ದರು.

ಸಂಖ್ಯಾಶಾಸ್ತ್ರದ ವಿಭಾಗದ ಮುಖ್ಯಸ್ಥೆ ಧನ್ಯ ಸ್ವಾಗತಿಸಿ ಉಪನ್ಯಾಸಕ ರಾಕೇಶ್ ವಂದಿಸಿದರು. ಉಪನ್ಯಾಸಕಿ ಧನ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News