ಮುಂಬೈ: ಇಂಜಿನ್ ಕವರ್ ಇಲ್ಲದೇ ಟೇಕಾಫ್ ಆದ 70 ಮಂದಿ ಪ್ರಯಾಣಿಕರಿದ್ದ ವಿಮಾನ !
ಮುಂಬೈ: 70 ಮಂದಿ ಪ್ರಯಾಣಿಸುತ್ತಿದ್ದ ಅಲಯನ್ಸ್ ಏರ್ ವಿಮಾನ ಇಂದು ಬೆಳಗ್ಗೆ ಮುಂಬೈನಿಂದ ಟೇಕ್ ಆಫ್ ಆಗಿದ್ದು, ಇಂಜಿನ್ ಕವರ್ ಇಲ್ಲದೆ ಗುಜರಾತ್‌ಗೆ ಹಾರಿದ ಘಟನೆ ನಡೆದಿದ್ದು, ವಿಮಾನವು ಸುರಕ್ಷಿತವಾಗಿ ಗುರಿ ತಲುಪಿದೆ ಎಂದು ತಿಳಿದು ಬಂದಿದೆ. ವಿಮಾನ ರನ್‌ವೇಯಲ್ಲಿದ್ದ ವೇಳೆ ಇಂಜಿನ್ ಕವರ್ ಕಳಚಿ ಬಿದ್ದಿತ್ತು ಎಂದು ndtv.com ವರದಿ ಮಾಡಿದೆ.
ಅಲಯನ್ಸ್ ಏರ್ ಎಟಿಆರ್ 72-600 ವಿಮಾನವು ಭುಜ್‌ನಲ್ಲಿ ಸುರಕ್ಷಿತವಾಗಿ ಇಳಿದಿದೆ. ಆದರೆ ವಿಮಾನಯಾನ ನಿಗಾವಹಿಸುವ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಇದು ಹೇಗೆ ಸಂಭವಿಸಿತು? ಎಂಬುವುದರ ಕುರಿತು ತನಿಖೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.
ವಿಮಾನ ಟೇಕಾಫ್ ಆಗುತ್ತಿದ್ದಂತೆ ಇಂಜಿನ್ ಕವರ್ (ಕೌಲಿಂಗ್) ವಿಮಾನದಿಂದ ಕಳಚಿ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟೇಕ್-ಆಫ್ ಅನ್ನು ಮೇಲ್ವಿಚಾರಣೆ ಮಾಡುತ್ತಿದ್ದ ಏರ್ ಟ್ರಾಫಿಕ್ ಕಂಟ್ರೋಲ್ ಈ ಕುರಿತು ಎಚ್ಚರಿಕೆ ನೀಡಿದ್ದು, ಮತ್ತು ಕೌಲಿಂಗ್ ನ ಭಾಗವು ರನ್‌ವೇಯಲ್ಲಿ ಕಂಡುಬಂದಿತ್ತು.
ಎಂಜಿನ್ ಕೌಲಿಂಗ್ (ಕವರ್) ನಷ್ಟದ ನಡುವೆಯೇ ತನ್ನ ಗಮ್ಯಸ್ಥಾನಕ್ಕೆ ಹಾರಾಟವನ್ನು ಮುಂದುವರೆಸಿದ ವಿಮಾನದ ಮೇಲೆ ಇದರಿಂದಾಗಿ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು DGCA ಯ ಮೂಲಗಳು NDTV ಗೆ ತಿಳಿಸಿವೆ. "ಮಾರ್ಜಿನಲ್ ಏರ್‌ಕ್ರಾಫ್ಟ್ ಕಾರ್ಯಕ್ಷಮತೆ ಕ್ಷೀಣತೆ" ಇದ್ದಿರಬಹುದು, ಮತ್ತು "ಗಾಳಿಯ ಹರಿವಿಗೆ ಒಡ್ಡಿಕೊಂಡ ಇಂಜಿನ್ ಘಟಕಗಳು ಪರಿಣಾಮ ಬೀರಬಹುದು" ಅಷ್ಟೇ, ಎಂದು ಮೂಲಗಳು ತಿಳಿಸಿವೆ.
ಈ ಸಂದರ್ಭದಲ್ಲಿ, ವಿಮಾನವು ಸುರಕ್ಷಿತವಾಗಿ ತನ್ನ ಗಮ್ಯಸ್ಥಾನಕ್ಕೆ ಬಂದಿಳಿದಿದೆ ಎಂದು ಅವರು ಹೇಳಿದರು.