×
Ad

ನೆರೆಯ ಕರ್ನಾಟಕದಲ್ಲಿ ನಡೆಯುತ್ತಿರುವುದು ತಮಿಳುನಾಡಿನಲ್ಲಿ ಆಗಬಾರದು: ​ಹಿಜಾಬ್ ಪ್ರಕರಣ ಕುರಿತು ಕಮಲ್ ಹಾಸನ್

Update: 2022-02-09 14:43 IST

ಚೆನ್ನೈ: ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ಪ್ರಕರಣದ ಬಗ್ಗೆ ನಟ ಕಮಲ್ ಹಾಸನ್ ಬುಧವಾರ ಟ್ವೀಟ್ ಮಾಡಿದ್ದಾರೆ . ಈ ವಿಷಯವು "ಮುಗ್ಧ ವಿದ್ಯಾರ್ಥಿಗಳ ನಡುವೆ ಕೋಮು ವಿಭಜನೆಯನ್ನು" ಸೃಷ್ಟಿಸುತ್ತಿದೆ ಎಂದು ಹೇಳಿದ್ದಾರೆ.

"ಕರ್ನಾಟಕದಲ್ಲಿ ನಡೆದ ಘಟನೆಯು ಅಶಾಂತಿಯನ್ನು ಪ್ರಚೋದಿಸುತ್ತಿದೆ. ಇದು ಮುಗ್ಧ ವಿದ್ಯಾರ್ಥಿಗಳ ನಡುವೆ ಕೋಮು ವಿಭಜನೆಯನ್ನು ಸೃಷ್ಟಿಸುತ್ತಿದೆ. ಇಂತಹ ಸಮಯದಲ್ಲಿ ತಮಿಳುನಾಡು ಹೆಚ್ಚು ಎಚ್ಚರಿಕೆ ಯಿಂದಿರಬೇಕು " ಎಂದು ಮಕ್ಕಳ್ ನೀಧಿ ಮೈಯಂ (ಎಂಎನ್ಎಂ) ಮುಖ್ಯಸ್ಥ ಕಮಲ್ ಹಾಸನ್ ಹೇಳಿದ್ದಾರೆ.

ನೆರೆಯ ಕರ್ನಾಟಕದಲ್ಲಿ ನಡೆಯುತ್ತಿರುವುದು ತಮಿಳುನಾಡಿನಲ್ಲಿ ಆಗಬಾರದು.  ಇಂತಹ ಸಂದರ್ಭದಲ್ಲಿ ರಾಜ್ಯದ ಪ್ರಗತಿಪರ ಶಕ್ತಿಗಳು ಹೆಚ್ಚು ಎಚ್ಚರಿಕೆ ವಹಿಸಬೇಕು ಎಂದು ಕಮಲ್ ಹಾಸನ್ ಹೇಳಿದ್ದಾರೆ.

ಏತನ್ಮಧ್ಯೆ, ಕರ್ನಾಟಕ ಹಿಜಾಬ್ ವಿವಾದದ ನಡುವೆ, ಪುದುಚೇರಿಯ ಸರಕಾರಿ ಶಾಲೆಯಲ್ಲಿ ಇದೇ ರೀತಿಯ ಹಿಜಾಬ್ ಸಮಸ್ಯೆ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News