ಭಾರತ ʼಚೀನಾ-ನಿರ್ಭರ್' ಆಗಿದೆಯೇ?: ರಾಮಾನುಜಾಚಾರ್ಯ ಪ್ರತಿಮೆಯ ಕುರಿತು ಕೇಂದ್ರವನ್ನು ಕೆಣಕಿದ ರಾಹುಲ್ ಗಾಂಧಿ

Update: 2022-02-09 11:09 GMT

ಹೊಸದಿಲ್ಲಿ:  ಹೈದರಾಬಾದ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಉದ್ಘಾಟಿಸಿರುವ ಸಮಾನತೆಯ ಪ್ರತಿಮೆಯನ್ನು ಚೀನಾದಲ್ಲಿ ನಿರ್ಮಿಸಲಾಗಿದೆ ಎಂದು ಬುಧವಾರ ಟ್ವೀಟಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರಕಾರದ ಆತ್ಮನಿರ್ಭರ್ ನೀತಿಯನ್ನು ಟೀಕಿಸಿದ್ದಾರೆ. 'ನವ ಭಾರತವು ಚೀನಾ-ನಿರ್ಭರ್'  ಆಗಿದೆಯೇ ಎಂದು ಕೇಳಿದ್ದಾರೆ.

"ಸಮಾನತೆಯ ಪ್ರತಿಮೆ ಚೀನಾದಲ್ಲಿ ತಯಾರಿಸಲ್ಪಟ್ಟಿದೆ. 'ಹೊಸ ಭಾರತ' ಚೀನಾ-ನಿರ್ಭರ್" ಆಗಿದೆಯೇ ಎಂದು ರಾಹುಲ್  ಇಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಯೋಜನೆಯ ವೆಬ್‌ಸೈಟ್ ಪ್ರಕಾರ, ಹೈದರಾಬಾದ್‌ನಲ್ಲಿರುವ 216 ಅಡಿ ರಾಮಾನುಜಾಚಾರ್ಯರ ಪ್ರತಿಮೆಯನ್ನು ಚೀನಾದ ಕಾರ್ಪೊರೇಷನ್ ತಯಾರಿಸಿದೆ. ರೂ. 135 ಕೋಟಿ ವೆಚ್ಚದ ಈ ಪ್ರತಿಮೆಯ ಗುತ್ತಿಗೆಯನ್ನು ಚೀನಾದ ಏರೋಸನ್ ಕಾರ್ಪೊರೇಷನ್‌ಗೆ 2015ರಲ್ಲಿ ನೀಡಲಾಗಿತ್ತು.

ಈ ಪ್ರತಿಮೆಯನ್ನು ಫೆಬ್ರವರಿ 5 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.

ಇದು ಹೈದರಾಬಾದ್‌ನ ಹೊರವಲಯದಲ್ಲಿರುವ 45 ಎಕರೆ ಸಂಕೀರ್ಣದಲ್ಲಿ ನೆಲೆಗೊಂಡಿದೆ. Rs1,000-ಕೋಟಿ ಯೋಜನೆಗೆ  ಸಂಪೂರ್ಣವಾಗಿ ಜಾಗತಿಕವಾಗಿ ಭಕ್ತರ ದೇಣಿಗೆಯಿಂದ ಹಣವನ್ನು ಪಡೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News