×
Ad

“ಉತ್ತರಪ್ರದೇಶವನ್ನು ಕೇರಳವಾಗಲು ಬಿಡಬೇಡಿ’’ ಎಂಬ ಆದಿತ್ಯನಾಥ್ ಹೇಳಿಕೆಗೆ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿದ್ದು ಹೀಗೆ…

Update: 2022-02-10 14:58 IST

ಹೊಸದಿಲ್ಲಿ: "ಉತ್ತರ ಪ್ರದೇಶವನ್ನು ಕೇರಳ ಅಥವಾ ಬಂಗಾಳವಾಗಿ ಬದಲಾಗದಂತೆ ಎಚ್ಚರಿಕೆ ವಹಿಸಿ " ಎಂದು  ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್  ಮೊದಲ ಹಂತದ ಮತದಾನಕ್ಕೆ ಮೊದಲು ವೀಡಿಯೊ ಸಂದೇಶದಲ್ಲಿ ಜನತೆಗೆ ವಿನಂತಿಸಿದ್ದರು. ಆದಿತ್ಯನಾಥ್ ಅವರ ಹೇಳಿಕೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಪ್ರತಿಕ್ರಿಯಿಸಿದ್ದಾರೆ.

"ಯೋಗಿ ಆದಿತ್ಯನಾಥ್ ಭಯಪಡುವಂತೆ ಉತ್ತರಪ್ರದೇಶವು ಕೇರಳವಾಗಿ ಬದಲಾದರೆ, ಅದು ಅತ್ಯುತ್ತಮ ಶಿಕ್ಷಣ, ಆರೋಗ್ಯ ಸೇವೆಗಳು, ಸಮಾಜ ಕಲ್ಯಾಣ, ಉತ್ತಮ ಜೀವನಮಟ್ಟವನ್ನು ಅನುಭವಿಸುತ್ತದೆ. ಧರ್ಮ ಹಾಗೂ  ಜಾತಿಯ ಹೆಸರಿನಲ್ಲಿ ಜನರನ್ನು ಹತ್ಯೆ ಮಾಡದ ಸಾಮರಸ್ಯದ ಸಮಾಜ ಇರುತ್ತದೆ. ಉತ್ತರ ಪ್ರದೇಶದ ಜನರೂ ಇದನ್ನೇ ಬಯಸುತ್ತಾರೆ’’ ಎಂದು ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ಆರಂಭವಾಗುವ ಗಂಟೆಗಳ ಮೊದಲು ನಿನ್ನೆ ಸಂಜೆ ವೀಡಿಯೊ ಸಂದೇಶವೊಂದರಲ್ಲಿ  ಮಾತನಾಡಿದ್ದ ಆದಿತ್ಯನಾಥ್ ಅವರು ಕಳೆದ ವರ್ಷ ಬಂಗಾಳದಲ್ಲಿ ಬಿಜೆಪಿಯನ್ನು ಸೋಲಿಸಿ ಮೂರನೇ ಬಾರಿ ಆಡಳಿತಕ್ಕೆ ಬಂದಿರುವ ತೃಣಮೂಲ ಕಾಂಗ್ರೆಸ್ ಹಾಗೂ  ಕೇರಳದಲ್ಲಿ ಮತ್ತೆ ಅಧಿಕಾರಕ್ಕೆ ಬಂದಿರುವ ಎಡಪಕ್ಷವನ್ನು  ಉಲ್ಲೇಖಿಸಿ ‘ಬಿಜೆಪಿಯನ್ನು ಆಯ್ಕೆ ಮಾಡುವಂತೆ’ ಮತದಾರರನ್ನು ಒತ್ತಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News