ಅಕ್ರಮ ಹಣ ವರ್ಗಾವಣೆ ಆರೋಪ: ಪತ್ರಕರ್ತೆ ರಾಣಾ ಅಯ್ಯೂಬ್‌ಗೆ ಸೇರಿದ ರೂ.1.77 ಕೋಟಿ ಜಪ್ತಿ ಮಾಡಿದ ಇಡಿ

Update: 2022-02-10 17:51 GMT
Photo: facebook/ranaayyubjournalist

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಪತ್ರಕರ್ತ ರಾಣಾ ಅಯ್ಯೂಬ್ ಅವರಿಗೆ ಸೇರಿದ ₹1.77 ಕೋಟಿಯನ್ನು ಜಾರಿ ನಿರ್ದೇಶನಾಲಯ ಗುರುವಾರ ಜಪ್ತಿ ಮಾಡಿದೆ ಎಂದು ವರದಿಯಾಗಿದೆ.

ದೇಣಿಗೆಯಾಗಿ ಪಡೆದ ಹಣವನ್ನು ಅಯ್ಯೂಬ್ ವೈಯಕ್ತಿಕ ಖರ್ಚಿಗೆ ಬಳಸುತ್ತಿದ್ದಾರೆ ಎಂದು ಕೇಂದ್ರ ತನಿಖಾ ಸಂಸ್ಥೆ ಆರೋಪಿಸಿದೆ.

ಸೆಪ್ಟೆಂಬರ್‌ನಲ್ಲಿ ಉತ್ತರ ಪ್ರದೇಶ ಪೊಲೀಸರು ದಾಖಲಿಸಿದ ಎಫ್‌ಐಆರ್ ಆಧರಿಸಿ ಇಡಿ ಕಳೆದ ವರ್ಷ ಅಯ್ಯೂಬ್ ವಿರುದ್ಧ ತನಿಖೆ ಆರಂಭಿಸಿತ್ತು.

ಉತ್ತರ ಪ್ರದೇಶ ಪೊಲೀಸರಿಗೆ ನೀಡಿದ ದೂರಿನಲ್ಲಿ, ದೂರುದಾರ ವಿಕಾಸ್ ಸಾಂಕೃತ್ಯಾಯನ್ ಅವರು ರಾಣಾ ಅಯ್ಯೂಬ್ ಕೆಟ್ಟೋನಲ್ಲಿ ಪರಿಹಾರ ಕ್ರಮಗಳ ಅಭಿಯಾನದ ಮೂಲಕ ಸಾರ್ವಜನಿಕ ಹಣವನ್ನು ಅಕ್ರಮವಾಗಿ ಸಂಪಾದಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇಡಿ ಮತ್ತು ಆದಾಯ ತೆರಿಗೆ ಇಲಾಖೆ ಎರಡೂ ಈ ವಿಷಯದಲ್ಲಿನ ಹಣಕಾಸಿನ ವಹಿವಾಟಿನ ಬಗ್ಗೆ ತನಿಖೆ ನಡೆಸುತ್ತಿವೆ.

ವಿದೇಶದಿಂದ ಯಾವುದೇ ನಿಧಿಯನ್ನು ಸ್ವೀಕರಿಸಲು ಕಡ್ಡಾಯವಾಗಿರುವ ಎಫ್‌ಸಿಆರ್‌ಎ (ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ) ಅಡಿಯಲ್ಲಿ ಯಾವುದೇ ಅನುಮೋದನೆ ಪಡೆಯದೆ ಅಯ್ಯೂಬ್ ವಿದೇಶಿ ದೇಣಿಗೆ ಪಡೆದಿದ್ದಾರೆ ಎಂದು ಇಡಿ ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News