ಉತ್ತರಾಖಂಡದಲ್ಲಿ ಭೂಕಂಪ

Update: 2022-02-12 02:02 GMT

ಡೆಹ್ರಾಡೂನ್: ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆ ಇದ್ದ ಭೂಕಂಪ ಉತ್ತರಾಖಂಡದ ಉತ್ತರ ಕಾಶಿಯಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಸಂಸ್ಥೆ ಪ್ರಕಟಿಸಿದೆ.

ಉತ್ತರಕಾಶಿಯ ತೆಹರಿ ಗರ್ವಾಲ್ ಪ್ರದೇಶದಿಂದ 39 ಕಿಲೋಮೀಟರ್ ಪೂರ್ವದಲ್ಲಿ ಮುಂಜಾನೆ 5.03ಕ್ಕೆ ಭೂಕಂಪ ಸಂಭವಿಸಿದೆ. ಅಕ್ಷಾಂಶ 30.72 ಮತ್ತು ರೇಖಾಂಶ 78.85ರಲ್ಲಿ 28 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ.

ಆದರೆ ಯಾವುದೇ ಆಸ್ತಿಪಾಸ್ತಿ ಅಥವಾ ಜೀವಹಾನಿ ಬಗ್ಗೆ ವರದಿಯಾಗಿಲ್ಲ. ಭೂಕಂಪದ ತೀವ್ರತೆ ಎಲ್ಲರ ಅನುಭವಕ್ಕೆ ಬರುವಂತೆ ಇತ್ತು ಎಂದು ಅಧಿಕೃತ ಮೂಲಗಳು ಹೇಳಿವೆ. 4.1 ತೀವ್ರತೆಯ ಭೂಕಂಪದಿಂದ ಪ್ಲಾಸ್ಟರ್ ಕುಸಿತ ಮತ್ತು ಕಿಟಕಿ ಗಾಜುಗಳು ಒಡೆಯುವ ಕೆಲ ನಿದರ್ಶನಗಳು ವರದಿಯಾಗುತ್ತವೆ ಎಂದು ಭೂಕಂಪ ಮಾಪನ ಕೇಂದ್ರ ಹೇಳಿದೆ.

ಅಫ್ಘಾನಿಸ್ತಾನ- ತಜಕಿಸ್ತಾನ ಗಡಿ ಪ್ರದೇಶದಲ್ಲಿ 5.7 ತೀವ್ರತೆಯ ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಇತರ ಉತ್ತರ ಭಾಗಗಳಲ್ಲಿ ಕಳೆದ ವಾರ ಕಂಪನದ ಅನುಭವ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News