ಹಿಜಾಬ್ ನಿಷೇಧ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂಬ ಅಮೆರಿಕದ ಹೇಳಿಕೆಗೆ ಭಾರತ ಪ್ರತಿಕ್ರಿಯಿಸಿದ್ದು ಹೀಗೆ...

Update: 2022-02-12 06:37 GMT

ಹೊಸದಿಲ್ಲಿ: ಹಿಜಾಬ್ ಕುರಿತು ಜಾಗತಿಕ ಕೋಲಾಹಲದ ನಡುವೆ, ಆಂತರಿಕ ವಿಷಯಗಳ ಕುರಿತು ಪೂರ್ವಗ್ರಹ ಪೀಡಿತ ಹೇಳಿಕೆಗಳನ್ನು ಸ್ವಾಗತಿಸಲಾಗುವುದಿಲ್ಲ ಎಂದು ಭಾರತ ಇಂದು ಹೇಳಿದೆ. 

ವಿದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ನಿಗಾ ವಹಿಸುವ ಹಾಗೂ ವರದಿ ಮಾಡುವ ಅಮೆರಿಕ ಸರಕಾರದ ಸಂಸ್ಥೆಯು ಹಿಜಾಬ್ ಪ್ರಕರಣದ ಕುರಿತು ಕರ್ನಾಟಕವನ್ನು ಟೀಕಿಸಿತ್ತು.

ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಅಥವಾ ಐಆರ್ಎಫ್ ನ ರಾಯಭಾರಿ ರಷದ್ ಹುಸೈನ್, "ಶಾಲೆಗಳಲ್ಲಿ ಹಿಜಾಬ್ ನಿಷೇಧವು ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ. ಕರ್ನಾಟಕದಲ್ಲಿ ಹಿಜಾಬ್ ನಿಷೇಧ ಮೇಲಿನ ಅರ್ಜಿಗಳ ಕುರಿತು ಹೈಕೋರ್ಟ್ ವಿಚಾರಣೆ ಪೂರ್ಣಗೊಳಿಸುವ ತನಕ ಶಾಲಾ-ಕಾಲೇಜು ಮುಚ್ಚಲು ಕಾರಣವಾಗಿರುವ ಹಿಜಾಬ್ ವಿವಾದವನ್ನು ಉಲ್ಲೇಖಿಸಿ ಹುಸೈನ್ ಟ್ವೀಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News