×
Ad

ಸಂಚಯ ಬೆಂಗಳೂರಿಗೆ ರಂಗಭೂಮಿ ನಾಟಕ ಪ್ರಶಸ್ತಿ ಪ್ರದಾನ

Update: 2022-02-12 21:11 IST

ಉಡುಪಿ, ಫೆ. 12: ಉಡುಪಿ ರಂಗಭೂಮಿ ವತಿಯಿಂದ ಇತ್ತೀಚೆಗೆ ನಡೆದ 42ನೇ ಆಜ್ಯಮಟ್ಟದ ನಾಟಕೋತ್ಸವ ಸ್ಪರ್ಧೆಯಲ್ಲಿ ಬಹುಮಾನ ವಿಜೇತ ತಂಡಗಳಿಗೆ ಹಾಗೂ ವೈಯಕ್ತಿಕ ಬಹುಮಾನ ಗೆದ್ದವರಿಗೆ ಇಂದು ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ರಂಗಭೂಮಿ ಉಡುಪಿ ವತಿಯಿಂದ ನಡೆಯುತ್ತಿರುವ ರಂಗೋತ್ಸವದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಯಿತು.

ಬೆಂಗಳೂರಿನ ಸಂಚಯ ತಂಡ ಗಣೇಶ್ ಮಂದಾರ್ತಿ ನಿರ್ದೇಶನದಲ್ಲಿ ಪ್ರದರ್ಶಿಸಿದ ಪೌರಾಣಿಕ ನಾಟಕ ‘ಕಾಮರೂಪಿಗಳ್’ ಪ್ರಥಮ ಬಹುಮಾನ ದೊಂದಿಗೆ ಇತರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.

ಬೆಂಗಳೂರಿನ ಸಂಚಯ ತಂಡ ಗಣೇಶ್ ಮಂದಾರ್ತಿ ನಿರ್ದೇಶನದಲ್ಲಿ ಪ್ರದರ್ಶಿಸಿದ ಪೌರಾಣಿಕ ನಾಟಕ ‘ಕಾಮರೂಪಿಗಳ್’ ಪ್ರಥಮ ಬಹುಮಾನ ದೊಂದಿಗೆ ಇತರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು. ನಾಟಕಗಳ ಪ್ರಭಾವದಿಂದ ಜೀವನದಲ್ಲಿ ಪರಿವರ್ತನೆ ಸಾಧ್ಯವಿದೆ. ರಂಗಭೂಮಿ ಸಮಾಜದ ಕಣ್ಣು ತೆರೆಸುವ ಕಾರ್ಯ ಮಾಡುತ್ತಿವೆ ಎಂದು ಮಟ್ಟಾರು ಹೇಳಿದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ತಹಶೀಲ್ದಾರ್ ಪ್ರದೀಪ್ ಎಸ್. ಕುರ್ಡೇಕರ್, ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ಎಸ್. ನಾಯ್ಕಾ, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ರಂಗಭೂಮಿ ಪದಾಧಿಕಾರಿಗಳಾದ ಭಾಸ್ಕರ ರಾವ್ ಕಿದಿಯೂರು, ನಂದಕುಮಾರ್, ಪ್ರದೀಪ್‌ಚಂದ್ರ ಕುತ್ಪಾಡಿ, ತೀರ್ಪುಗಾರರಾದ ಎನ್.ಆರ್.ಬಲ್ಲಾಳ್, ಲಕ್ಷ್ಮೀ ನಾರಾಯಣ ಭಟ್, ಗುಂಡಣ್ಣ ಚಿಕ್ಕಮಗಳೂರು ಮುಂತಾದವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಪ್ರಥಮ ಬಹುಮಾನ ವಿಜೇತ ಸಂಚಯ ಬೆಂಗಳೂರು ಇವರ ‘ಕಾಮರೂಪಿಗಳ್’ ನಾಟಕದ ಮರು ಪ್ರದರ್ಶನ ಪ್ರಸ್ತುತಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News