×
Ad

ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಮೊತ್ತಕ್ಕೆ ಹರಾಜಾದ ಉದಯೋನ್ಮುಖ ಆಟಗಾರ ಅವೇಶ್ ಖಾನ್

Update: 2022-02-12 23:00 IST

ಬೆಂಗಳೂರು:  ಬಲಗೈ ವೇಗದ ಬೌಲರ್ ಅವೇಶ್ ಖಾನ್ 10 ಕೋ.ರೂ. ಬೆಲೆಗೆ ಹೊಸ ತಂಡ ಲಕ್ನೊ ಸೂಪರ್ ಜೈಂಟ್ಸ್ ಪಾಲಾದರು. 

 ಅವೇಶ್ ಇದೀಗ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಮೊತ್ತಕ್ಕೆ ಬಿಕರಿಯಾದ ಉದಯಯೋನ್ಮುಖ(ಇದುವೆರೆಗೆ ಅಂತರ್ ರಾಷ್ಟ್ರೀಯ ಕ್ರಿಕೆಟ್ ಆಡದ) ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು.

ಕಳೆದ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಅವೇಶ್ 20 ಲಕ್ಷ ರೂ. ಮೂಲ ಬೆಲೆ ಹೊಂದಿದ್ದರು. ಇನ್ನುಳಿದ ಉದಯೋನ್ಮುಖ ಆಟಗಾರರಾದ ಶಾರೂಕ್ ಖಾನ್ , ರಾಹುಲ್ ಟೆವಾಟಿಯ, ಅಭಿಷೇಕ್ ಶರ್ಮಾ ಹಾಗೂ ಡೆವಾಲ್ಡ್ ಬ್ರೆವಿಸ್ ಭಾರೀ ಮೊತ್ತಕ್ಕೆ ಹರಾಜಾಗಿ ಗಮನ ಸೆಳೆದಿದ್ದಾರೆ.

ಕನ್ನಡಿಗರಾದ ಶ್ರೇಯಸ್ ಗೋಪಾಲ್( 75 ಲಕ್ಷ ರೂ.), ಕೆ.ಸಿ.ಕಾರಿಯಪ್ಪ( 30 ಲಕ್ಷ)ಕ್ರಮವಾಗಿ ಹೈದರಾಬಾದ್ ಹಾಗೂ ರಾಜಸ್ಥಾನ ತಂಡದ ತೆಕ್ಕೆಗೆ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News