×
Ad

ಗಾಲಿ ಕುರ್ಚಿಗೆ ಪ್ರವೇಶವಿಲ್ಲ ಎಂದು ʼವಿಕಲಚೇತನʼ ಮಹಿಳೆಯನ್ನು ತಡೆದ ರೆಸ್ಟಾರೆಂಟ್‌ ಸಿಬ್ಬಂದಿ; ಮಾಲಕರು ಹೇಳಿದ್ದೇನು?

Update: 2022-02-13 19:36 IST
Screengrab(Twitter/@Srishhhh_tea)

ಹೊಸದಿಲ್ಲಿ: “ಇತರ ಗ್ರಾಹಕರಿಗೆ ತೊಂದರೆ ಉಂಟುಮಾಡಬಹುದು” ಎಂದು ವಿಕಲ ಚೇತನ ಮಹಿಳೆಯೊಬ್ಬರನ್ನು ಗುರ್ಗಾಂವ್‌ನ ರೆಸ್ಟೋರೆಂಟ್ ಒಂದಕ್ಕೆ ಪ್ರವೇಶಿಸದಂತೆ ತಡೆದ ಘಟನೆ ಬೆಳಕಿಗೆ ಬಂದಿದೆ.

ವೀಲ್‌ ಚೇರ್‌ನಲ್ಲಿ ಬಂದವರು ರೆಸ್ಟೋರೆಂಟ್‌ಗೆ ಪ್ರವೇಶಿಸುವಂತಿಲ್ಲ ಎಂದು ರೆಸ್ಟಾರೆಂಟ್‌ ಸಿಬ್ಬಂದಿ ನಮ್ಮನ್ನು ತಡೆದಿದ್ದಾರೆ ಎಂದು ಮಹಿಳೆ ಟ್ವಿಟರಿನಲ್ಲಿ ಆರೋಪಿಸಿದ್ದಾರೆ.

 ತನಗಾದ ಕರಾಳ ಅನುಭವವನ್ನು ಟ್ವಿಟರಿನಲ್ಲಿ ಹಂಚಿಕೊಂಡಿರುವ ಸೃಷ್ಟಿ, ʼ ಶುಕ್ರವಾರದಂದು ತನ್ನ ಆತ್ಮೀಯ ಸ್ನೇಹಿತೆ ಮತ್ತು ಆಕೆಯ ಕುಟುಂಬದೊಂದಿಗೆ ವಿಹಾರಕ್ಕೆ ಹೋಗಿದ್ದೆ. ಆದರೆ, "ಗಾಲಿಕುರ್ಚಿ ಒಳಗೆ ಹೋಗುವಂತಿಲ್ಲ" ಎಂದು ರಾಸ್ತಾ ರೆಸ್ಟೋರೆಂಟ್‌ನ ಸಿಬ್ಬಂದಿಯಿಂದ ತಮ್ಮನ್ನು ತಡೆದಿದ್ದಾರೆ ಎಂದು ಅವರು ಬರೆದಿದ್ದಾರೆ.

ರೆಸ್ಟೋರೆಂಟ್‌ನಲ್ಲಿನ ಸಿಬ್ಬಂದಿ ತನ್ನ ಉಪಸ್ಥಿತಿಯು ಇತರ ಗ್ರಾಹಕರಿಗೆ ತೊಂದರೆಯಾಗಬಹುದು ಎಂದು ಸೂಚಿಸಿದಾಗ ತಾನು ಆಘಾತಗೊಂಡಿರುವುದಾಗಿ ಸೃಷ್ಟಿ ಹೇಳಿದ್ದಾರೆ.

"ತುಂಬಾ ಸುಲಭವಾಗಿ ಗ್ರಾಹಕರು ತೊಂದರೆಗೊಳಗಾಗುತ್ತಾರೆ ಎಂದು ಅವರು ನನ್ನ ಕಡೆಗೆ ತೋರಿಸುತ್ತಾ ನಮಗೆ ಹೇಳಿದರು, ನಮಗೆ ಪ್ರವೇಶವನ್ನು ನಿರಾಕರಿಸಿದರು. ಇದರಿಂದ ನಾನು ತುಂಬಾ ದುಃಖಿತನಾಗಿದ್ದೇನೆ, ನನಗೆ ಅಸಹ್ಯವಾಗುತ್ತಿದೆ” ಎಂದು ಸೃಷ್ಟಿ ಹೇಳಿದ್ದಾರೆ.  

ಗುರುಗ್ರಾಮ್‌ನ ಡಿಎಲ್‌ಎಫ್ ಸೈಬರ್‌ಹಬ್‌ನಲ್ಲಿರುವ ರಾಸ್ತಾ ರೆಸ್ಟಾರೆಂಟ್ ಆಡಳಿತ ಮಂಡಳಿ ಇದೀಗ ಘಟನೆಗೆ ಕ್ಷಮೆಯಾಚಿಸಿದೆ. ಮತ್ತು ತಮ್ಮ ಸಿಬ್ಬಂದಿಗೆ ಸೂಕ್ಷ್ಮತೆ ಮತ್ತು ಸಹಾನುಭೂತಿಯನ್ನು ಹೆಚ್ಚಿಸಲು ಆಂತರಿಕವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದೆ.

"ಶುಕ್ರವಾರ ಸಂಜೆ ಗುರ್ಗಾಂವ್‌ನ ರಾಸ್ತಾದಲ್ಲಿ ನಡೆದ ಘಟನೆಗೆ ನಾವು ತೀವ್ರವಾಗಿ ವಿಷಾದಿಸುತ್ತೇವೆ. ನಾವು ಎಲ್ಲರನ ಒಳಗೊಳ್ಳುವಿಕೆಗಾಗಿ ನಿಲ್ಲುತ್ತೇವೆ ಮತ್ತು ಯಾವುದೇ ಕಾರಣಕ್ಕೂ ಯಾರನ್ನೂ ಪ್ರತ್ಯೇಕಿಸಲು ಬಯಸುವುದಿಲ್ಲ. ವೈಯಕ್ತಿಕವಾಗಿ ಕ್ಷಮೆಯಾಚಿಸಲು ನಾವು ಈಗಾಗಲೇ ಸಂತ್ರಸ್ತೆಯನ್ನು ಸಂಪರ್ಕಿಸುತ್ತಿದ್ದೇವೆ. ನಾವು ನಮ್ಮ ಸಿಬ್ಬಂದಿಗೆ ಸಂವೇದನಾಶೀಲತೆ ಮತ್ತು ಸಹಾನುಭೂತಿಯನ್ನು ಹೆಚ್ಚಿಸಲು ಆಂತರಿಕವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಇದು ಎಂದಿಗೂ ಪುನರಾವರ್ತಿಸುವುದಿಲ್ಲ” ಎಂದು ರಾಸ್ತಾದ ಸಂಸ್ಥಾಪಕ ಪಾಲುದಾರ ಗೌಮ್ತೇಶ್ ಸಿಂಗ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News