ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
Update: 2022-02-13 22:19 IST
ಕುಂದಾಪುರ, ಫೆ.13: ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಕಂದಾವರ ಉಳ್ಳೂರು ನಿವಾಸಿ ಯು.ರಾಘವೇಂದ್ರ (42) ಎಂಬವರು ಫೆ.12ರಂದು ಮಧ್ಯಾಹ್ನ ತಾನು ವಾಸವಾಗಿರುವ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ದುರ್ಗಾ ಗ್ರಾಮದ ಶೆಟ್ಟಿಬೆಟ್ಟು ನಿವಾಸಿ ಚಿದಾನಂದ ಭಟ್ಟ(42) ಎಂಬವರು ಫೆ.12ರಂದು ಮಧ್ಯಾಹ್ನ ಮನೆಯ ಹಿಂಭಾಗ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.