×
Ad

​ಕಸಾಪ: ಜಿಲ್ಲಾ ಕಾರ್ಯಕಾರಿ ಸಮಿತಿ, ತಾಲೂಕು ಅಧ್ಯಕ್ಷರ ಘೋಷಣೆ

Update: 2022-02-14 19:08 IST

ಉಡುಪಿ, ಫೆ.14: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯಕಾರಿ ಸಮಿತಿ ಹಾಗೂ ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರುಗಳ ಪಟ್ಟಿಯನ್ನು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಶನಿವಾರ ಹೊಟೇಲ್ ಕಿದಿಯೂರಿನಲ್ಲಿ ನಡೆದ ಜಿಲ್ಲಾ ಕಸಾಪ ಸಭೆಯಲ್ಲಿ ಪ್ರಕಟಿಸಿದರು.

ಈ ಪಟ್ಟಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಅವರು ಅನುಮೋದಿಸಿದ್ದಾರೆ ಎಂದು ನೀಲಾವರ ಸುರೇಂದ್ರ ಅಡಿಗ ಸಭೆಗೆ ತಿಳಿಸಿದರು.

ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿ ಸುಬ್ರಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ ಹಾಗೂ ಗೌರವ ಕೋಶಾಧ್ಯಕ್ಷರು ಮನೋಹರ ಪಿ.
ತಾಲೂಕುವಾರು ಅಧ್ಯಕ್ಷರು: ಉಡುಪಿಗೆ ರವಿರಾಜ್ ಹೆಚ್.ಪಿ., ಕಾಪು - ಪುಂಡಲೀಕ ಮರಾಠೆ, ಹೆಬ್ರಿ- ಶ್ರೀನಿವಾಸ ಭಂಡಾರಿ, ಬೈಂದೂರು -ಡಾ. ರಘು ನಾಯ್ಕ, ಬ್ರಹ್ಮಾವರ -ಜಿ.ರಾಮಚಂದ್ರ ಐತಾಳ್, ಕಾರ್ಕಳ- ಪ್ರಭಾಕರ ಶೆಟ್ಟಿ ಹಾಗೂ ಕುಂದಾಪುರ -ಡಾ.ಉಮೇಶ್ ಪುತ್ರನ್.

ಸಭೆಯಲ್ಲಿ ಹಿರಿಯ ಸಾಹಿತಿ ಉಪೇಂದ್ರ ಸೋಮಯಾಜಿ, ಪಾರಂಪಳ್ಳಿ ನರಸಿಂಹ ಐತಾಳ್, ಕಟಿಂಗೇರಿ ದೇವದಾಸ ಹೆಬ್ಬಾರ್, ನರಸಿಂಹ ಮೂರ್ತಿ, ಕೋ.ಚ. ನಾವಡ, ಪಿ.ವಿ.ಆನಂದ್, ಸೂರಾಲು ನಾರಾಯಣ ಮಡಿ, ಜನಾರ್ದನ ಕೊಡವೂರು, ಕುರವತ್ತಿ ಗೌಡ, ಮೋಹನ ಉಡುಪ, ರಾಜು ಎನ್ ಆಚಾರ್ಯ ಉಪಸ್ಥಿತರಿದ್ದರು.

ಜಿಲ್ಲಾ ವಿಶೇಷ ಆಹ್ವಾನಿತರು, ಇನ್ನಿತರ ಸದಸ್ಯರು ಹಾಗೂ ತಾಲ್ಲೂಕು ಕಾರ್ಯಕಾರಿ ಸಮಿತಿ, ಹೋಬಳಿ ಸಮಿತಿಗಳನ್ನು ರಾಜ್ಯಾಧ್ಯಕ್ಷರ ಅನುಮತಿ ಪಡೆದು ತಿಳಿಸಲಾಗುವುದು ಎಂದು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News