ಜನಪ್ರಿಯ ಗೇಮ್ ʼಗರೇನಾ ಫ್ರೀ ಫಯರ್ʼ ಭಾರತದಲ್ಲಿ ಅಲಭ್ಯ
Update: 2022-02-15 23:11 IST
ಹೊಸದಿಲ್ಲಿ, ಫೆ. 15: ಸೀ ಲಿಮಿಟೆಡ್ ಮಾಲಕತ್ವದ ಫ್ರೀ ಫಯರ್ ಆಟ ಪ್ರಸ್ತುತ ಭಾರತದ ಆ್ಯಪ್ ಸ್ಟೋರ್ ಗಳಲ್ಲಿ ಲಭ್ಯವಿಲ್ಲ ಎಂದು ಗರೇನಾ ಇಂಟರ್ನ್ಯಾಷನಲ್ ನ ಘಟಕ ಸೋಮವಾರ ಹೇಳಿದೆ. ಭದ್ರತಾ ಕಾರಣದ ಹಿನ್ನೆಲೆಯಲ್ಲಿ ಭಾರತ ಚೀನಾದ 54 ಆ್ಯಪ್ಗಳನ್ನು ರದ್ದುಗೊಳಿಸಿದ ಒಂದು ದಿನದ ಬಳಿಕ ಗರೇನಾ ಇಂಟರ್ನ್ಯಾಷನಲ್ ಘಟಕ ಈ ವಿಚಾರ ತಿಳಿಸಿದೆ.
ಗೂಗಲ್ ಪ್ಲೇ ಸ್ಟೋರ್ ಹಾಗೂ ಐಒಎಸ್ ಆ್ಯಪ್ ಸ್ಟೋರ್ ನಲ್ಲಿ ಈ ಆಟ ಲಭ್ಯವಾಗುತ್ತಿಲ್ಲ. ಈ ಸಮಸ್ಯೆ ಪರಿಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಅದು ತಿಳಿಸಿದೆ. ಭಾರತ ಹಾಗೂ ಚೀನಾದ ನಡುವೆ 2020ರಲ್ಲಿ ಉದ್ಭವಿಸಿದ ರಾಜಕೀಯ ಉದ್ವಿಗ್ನತೆಯ ಬಳಿಕ ಭಾರತ ಟಿಕ್ ಟಾಕ್ ಸೇರಿದಂತೆ ಚೀನಾದ 59 ಆ್ಯಪ್ ಗಳಿಗೆ ನಿಷೇಧ ವಿಧಿಸಿತ್ತು.