×
Ad

ಸಂತ ರವಿದಾಸ್ ಜಯಂತಿಯಂದು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯಿಂದ ಲಂಗರ್ ಸೇವೆ

Update: 2022-02-16 14:27 IST

ಹೊಸದಿಲ್ಲಿ: ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ  ಪ್ರಿಯಾಂಕಾ ವಾದ್ರಾ ಅವರು ದಲಿತ ಐಕಾನ್ ರವಿದಾಸ್ ಜಯಂತಿಯಂದು ವಾರಣಾಸಿಯ ದೇವಸ್ಥಾನದಲ್ಲಿ ಇಂದು ಲಂಗರ್ ಸೇವೆ ಸಲ್ಲಿಸಿದರು.

ಜಾತಿಯನ್ನು ಲೆಕ್ಕಿಸದೆ ಎಲ್ಲರಿಗೂ ಸಮಾನತೆ ಹಾಗೂ  ಘನತೆಗಾಗಿ ಪ್ರತಿಪಾದಿಸಿದ ಸಂತ ರವಿದಾಸ್ ಅವರನ್ನು ದಲಿತ ಐಕಾನ್ ಎಂದು ಪರಿಗಣಿಸಲಾಗಿದೆ. ಅವರು ಲಿಂಗ ಸಮಾನತೆಯನ್ನು ಉತ್ತೇಜಿಸಿದರು. ಲಿಂಗ ಅಥವಾ ಜಾತಿಯ ಆಧಾರದ ಮೇಲೆ ಸಮಾಜದ ವಿಭಜನೆಯನ್ನು ವಿರೋಧಿಸಿದ್ದರು.

ಇಂದು ಮುಂಜಾನೆ ಪ್ರಧಾನಿ ನರೇಂದ್ರ ಮೋದಿ ಅವರು ದಿಲ್ಲಿಯ ಕರೋಲ್ ಬಾಗ್‌ನಲ್ಲಿರುವ ಗುರು ರವಿದಾಸ್ ವಿಶ್ರಾಮ್ ಧಾಮ್ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅವರು ಭಕ್ತರೊಂದಿಗೆ ಸಂವಾದ ನಡೆಸಿದರು ಮತ್ತು ದೇವಸ್ಥಾನದಲ್ಲಿ 'ಶಾಬಾದ್ ಕೀರ್ತನೆ'ಯಲ್ಲಿ ಭಾಗವಹಿಸಿದರು. ತಮ್ಮ ಸರಕಾರವು ಪ್ರತಿ ಹೆಜ್ಜೆ ಮತ್ತು ಯೋಜನೆಯಲ್ಲಿ ಗುರು ರವಿದಾಸ್ ಅವರ ಚೈತನ್ಯವನ್ನು ತುಂಬಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಗುರು ರವಿದಾಸ್ ಅವರ ಜನ್ಮಸ್ಥಳವಾದ ಸೀರ್ ಗೋವರ್ಧನಪುರಕ್ಕೆ ಭೇಟಿ ನೀಡಲು ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಅವರು ಚುನಾವಣಾ ಪ್ರಚಾರದಿಂದ ಬಿಡುವು ಮಾಡಿಕೊಂಡು ಅಲ್ಲಿಗೆ ತೆರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News