ಆದಿತ್ಯನಾಥ್ ಗೆ ಮತ ಹಾಕಿ, ಇಲ್ಲವೇ ಬುಲ್ಡೋಜರ್ ಎದುರಿಸಲು ಸಿದ್ದರಾಗಿ: ಬಿಜೆಪಿ ಶಾಸಕ ರಾಜಾ ಸಿಂಗ್ ಬೆದರಿಕೆ
ಹೊಸದಿಲ್ಲಿ: ಉತ್ತರ ಪ್ರದೇಶದ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಈಗ ನಡೆಯುತ್ತಿರುವ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿರುವ ಪ್ರದೇಶಗಳನ್ನು ಗುರುತಿಸಲಿದೆ. ಅಲ್ಲಿ ಬುಲ್ಡೋಜರ್ ಅನ್ನು ಓಡಿಸಲಿದೆ ಎಂದು ತೆಲಂಗಾಣ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಹೇಳಿದ್ದಾರೆ.
ಆದಿತ್ಯನಾಥ್ ಪುನರಾಯ್ಕೆಯಾಗುವುದನ್ನು ಬಯಸದವರು ಪಶ್ಚಿಮ ಉತ್ತರ ಪ್ರದೇಶದಲ್ಲಿ ಮತ ಚಲಾಯಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ ಎಂದು ಬಿಜೆಪಿ ಶಾಸಕ ಹೇಳಿದ್ದಾರೆ.
ಫೆಬ್ರವರಿ 14, ಸೋಮವಾರದಂದು ರಾಜ್ಯದಲ್ಲಿ 55 ಸ್ಥಾನಗಳಲ್ಲಿ ನಡೆದ ಎರಡನೇ ಹಂತದ ಮತದಾನದಲ್ಲಿ ಶೇ.63ರಷ್ಟು ಮತದಾನವಾಗಿದೆ. ಫೆಬ್ರವರಿ 10 ರಂದು ನಡೆದ ಮೊದಲ ಹಂತದಲ್ಲಿ 55 ಸ್ಥಾನಗಳಲ್ಲಿ. 60.17 ಶೇ. ಮತದಾನವಾಗಿದೆ.
ಉತ್ತರ ಪ್ರದೇಶ ಎರಡನೇ ಹಂತದಲ್ಲಿ ಮತದಾನ ನಡೆದ ದಿನದಂದು ರಾಜ್ ಅವರು ತಮ್ಮ ಅಧಿಕೃತ ಫೇಸ್ಬುಕ್ ಪುಟದಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿದರು.
ರಾಜ್ಯದಲ್ಲಿ ಆದಿತ್ಯನಾಥ್ ಅವರನ್ನು ಅಧಿಕಾರದಿಂದ ಹೊರಗಿಡಲು "ದೇಶದ್ರೋಹಿಗಳು" ಪಿತೂರಿ ನಡೆಸುತ್ತಿದ್ದಾರೆ ಎಂದು ಉಲ್ಲೇಖಿಸಿರುವ ಅವರು ಉಳಿದ ಐದು ಹಂತಗಳಲ್ಲಿ ತಮ್ಮ ಹಕ್ಕು ಚಲಾಯಿಸಲು ಹೆಚ್ಚಿನ ಸಂಖ್ಯೆಯಲ್ಲಿ "ಹಿಂದೂ ಸಹೋದರರು ಮತ್ತು ಸಹೋದರಿಯರು" ಬರಬೇಕೆಂದು ಅವರು ಮನವಿ ಮಾಡಿದ್ದಾರೆ.
ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಸಾವಿರಾರು ಬುಲ್ಡೋಜರ್ಗಳು ಮತ್ತು ಜೆಸಿಬಿಗಳನ್ನು ಖರೀದಿಸಿದ್ದಾರೆ ಹಾಗೂ ಸಜ್ಜುಗೊಳಿಸಿದ್ದಾರೆ. ಜೆಸಿಬಿಗಳು ಮತ್ತು ಬುಲ್ಡೋಜರ್ಗಳನ್ನು ಯಾವುದಕ್ಕಾಗಿ ಬಳಸಲಾಗುತ್ತದೆ ಎಂದು ನಿಮಗೆ ತಿಳಿದಿದೆ ಎಂದು ನನಗೆ ಖಾತ್ರಿಯಿದೆ. ಆದಿತ್ಯನಾಥ್ ಅವರು ಮತ್ತೊಮ್ಮೆ ಸಿಎಂ ಆಗುವುದನ್ನು ಬಯಸದ ದೇಶದ್ರೋಹಿಗಳಿಗೆ ನಾನು ತಿಳಿಸಲು ಬಯಸುತ್ತೇನೆ, ನೀವು ಉತ್ತರಪ್ರದೇಶದಲ್ಲಿ ಉಳಿಯಬೇಕಾದರೆ ‘ಯೋಗಿ-ಯೋಗಿ’ ಜಪ ಮಾಡಬೇಕಾಗುತ್ತದೆ. ಇಲ್ಲದಿದ್ದಲ್ಲಿ ರಾಜ್ಯ ಬಿಟ್ಟು ಓಡಿ ಹೋಗಬೇಕಾಗುತ್ತದೆ'' ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ರಸ್ತೆ ಅಪಘಾತಕ್ಕೆ ನಾಲ್ವರು ಕಾಲೇಜು ವಿದ್ಯಾರ್ಥಿಗಳು ಬಲಿ