ಫೆ.19: ಸಾಂತೂರು-ಪಿಲ್ಲಾರುನಲ್ಲಿ ಗ್ರಾಮವಾಸ್ತವ್ಯ
Update: 2022-02-16 20:27 IST
ಉಡುಪಿ, ಫೆ.16: ಕಾಪು ತಾಲೂಕು ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಂತೂರು-ಪಿಲಾರು ಗ್ರಾಮದಲ್ಲಿ ಫೆಬ್ರವರಿ 19ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಸಾಂತೂರು ವಿದ್ಯಾನಗರದ ದುರ್ಗಾ ಮಂದಿರ ಹಾಲ್‌ನಲ್ಲಿ ಕಾಪು ತಹಶೀಲ್ದಾರ್ ಅವರು ಇತರ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.
ಸಾಂತೂರು-ಪಿಲಾರು ಗ್ರಾಮಗಳ ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಅಹವಾಲನ್ನು ಲಿಖಿತವಾಗಿ ಫೆ.18ರೊಳಗೆ ಗ್ರಾಮ ಲೆಕ್ಕಿಗರಿಗೆ ಸಲ್ಲಿಸಬೇಕು. ಸಲ್ಲಿಸಲಾದ ಅರ್ಜಿಗಳ ಮೇಲೆ ತೆಗೆದುಕೊಂಡ ಕ್ರಮಗಳನ್ನು ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ತಿಳಿಸಲಾಗುವುದು.
ಮೇಲೆ ತಿಳಿಸಿದ ಗ್ರಾಮಗಳ ಸಾರ್ವಜನಿಕರು ಗ್ರಾಮವಾಸ್ತವ್ಯದಲ್ಲಿ ಭಾಗವಹಿಸಿ ಕುಂದುಕೊರತೆಗಳನ್ನು ಬಗೆಹರಿಸಿಕೊಳ್ಳುವಂತೆ ಕಾಪು ತಾಲೂಕು ತಹಶೀಲ್ದಾರರ ಪ್ರಕಟಣೆ ತಿಳಿಸಿದೆ.