×
Ad

ಗಾಂಧಿ ಚಿಂತನೆಗಳಿಂದ ರಾಷ್ಟ್ರಪ್ರೇಮ ಸಚ್ಛಾರಿತ್ರ್ಯ ನಿರ್ಮಾಣ: ಪ್ರೊ.ಯಡಪಡಿತ್ತಾಯ

Update: 2022-02-19 19:56 IST

ಶಿರ್ವ, ಫೆ.19: ಜಗತ್ತಿನಾದ್ಯಂತ ನಾಗರಿಕ ಹಕ್ಕು ಮತ್ತು ಸ್ವಾತಂತ್ರತ್ಯದ ಎಚ್ಚರ ಮೂಡಿಸುವಲ್ಲಿ ಗಾಂಧೀಜಿಯ ಚಿಂತನೆಗಳು ಅನನ್ಯ ಕೊಡುಗೆ ನೀಡಿವೆ. ಗಾಂಧೀಜಿಯ ಜೀವನ ಮತ್ತು ವಿಚಾರಗಳನ್ನು ಬಿತ್ತುವ ಮೂಲಕ ಯುವ ಜನರಲ್ಲಿ ರಾಷ್ಟ್ರಪ್ರೇಮ ಸಚ್ಛಾರಿತ್ರ್ಯ ನಿರ್ಮಾಣ ಮಾಡಬಹುದು. ಗಾಂಧೀಜಿಯ ಚಿಂತನೆಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ತತ್ವಾ ದರ್ಶಗಳನ್ನು ಪಾಲಿಸಿದಂತಾಗುತ್ತದೆ ಎಂದು ಮಂಗಳೂರು ವಿವಿ ಉಪಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಹೇಳಿದ್ದಾರೆ.

ಮಂಗಳೂರು ವಿ.ವಿ. ಗಾಂಧಿ ಅಧ್ಯಯನ ಕೇಂದ್ರ, ನೆಹರು ಚಿಂತನಾ ಕೇಂದ್ರ ಮತ್ತು ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜು ಶಿರ್ವ ಇವುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಶಿರ್ವ ಹಿಂದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಗಾಂಧಿ ಚಿಂತನ ಯಾನ -2022 ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಶಿರ್ವ ವಿದ್ಯಾವರ್ಧಕ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ್ ಶೆಟ್ಟಿ ಮಾತನಾಡಿದರು. ಮಂಗಳೂರು ವಿವಿ ನೆಹರು ಚಿಂತನ ಕೇಂದ್ರದ ಪ್ರಭಾರ ನಿರ್ದೇಶಕ ಪ್ರೊ. ರಾಜಾರಾಮ ತೋಳ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಧ್ಯಕ್ಷತೆ ಶಿರ್ವ ವಿದ್ಯಾವರ್ಧಕ ಸಂಘದ ಸಂಚಾಲಕ ವಿ.ಸುಬ್ಬಯ್ಯ ಹೆಗ್ಡೆ ವಹಿಸಿದ್ದರು. ಶಿರ್ವ ಗ್ರಾಪಂ ಅಧ್ಯಕ್ಷ ಕೆ.ಆರ್.ಪಾಟ್ಕರ್ ಉಪಸ್ಥಿತರಿದ್ದರು. ಶಿರ್ವ ಎಂಎಸ್ ಆರ್‌ಎಸ್ ಕಾಲೇಜಿನ ಪ್ರಾಂಶುಪಾಲೆ ಡಾ.ನಯನಾ ಎಂ.ಪಕ್ಕಳ ಸ್ವಾಗತಿಸಿದರು. ಉಪನ್ಯಾಸಕಿ ಸೋನಾ ಕಾರ್ಯಕ್ರಮ ನಿರೂಪಿಸಿದರು. ಉಪ ನ್ಯಾಸಕ ಪ್ರೊ.ಕೆ.ಜಿ.ಮಂಜುನಾಥ್ ವಂದಿಸಿದರು.

ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್ ಕುಮಾರ್, ಉಜಿರೆ ಎಸ್‌ಡಿಎಂ ಕಾಲೇಜಿನ ಪ್ರಾಧ್ಯಾಪಕ ಡಾ.ರಾಜಶೇಖರ್ ಹಳೆಮನೆ, ಬ್ರಹ್ಮಾವರ ಎಸ್‌ಎಂಎಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಅಭಿಲಾಷಾ ಎಸ್., ಕೋಟ ಸರಕಾರಿ ಪದವಿ ಪೂರ್ವ ಕಾಲೇಜಿನ ಸಹ ಅಧ್ಯಾಪಕ ಪ್ರಶಾಂತ್ ನೀಲಾವಾರ ಉಪನ್ಯಾಸ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News