×
Ad

ಮಲ್ಪೆ ಬೀಚ್‌ನಲ್ಲಿ ಮುಳುಗುತ್ತಿದ್ದ ಮೂವರ ರಕ್ಷಣೆ

Update: 2022-02-19 20:02 IST

ಉಡುಪಿ, ಫೆ.19: ಮಲ್ಪೆ ಬೀಚ್ ಸಮುದ್ರದಲ್ಲಿ ಮುಳುಗುತ್ತಿದ್ದ ಬೆಂಗಳೂರಿನ ಮೂವರು ಪ್ರವಾಸಿಗರನ್ನು ಜೀವರಕ್ಷಕ ದಳದವರು ರಕ್ಷಿಸಿರುವ ಘಟನೆ ಫೆ.19 ರಂದು ಸಂಜೆ 4.30ಕ್ಕೆ ನಡೆದಿದೆ.

ಬೆಂಗಳೂರಿನ ಇಂದಿರಾನಗರ 4ನೇ ಕ್ರಾಸ್‌ನ ಐವರು ಮ್ಪೆ ಬೀಚ್‌ಗೆ ಪ್ರವಾಸಕ್ಕೆ ಬಂದಿದ್ದರು. ಇದರಲ್ಲಿ ಮೂವರು ಸಮುದ್ರದಲ್ಲಿ ಆಡುತ್ತಿದ್ದರು. ಆಗ ಇವರು ಅಲೆಗಳ ಅಬ್ಬರಕ್ಕೆ ನೀರಿನಲ್ಲಿ ಕೊಚ್ಚಿ ಹೋಗಿ ಮುಳುಗುತ್ತಿದ್ದರೆನ್ನಲಾಗಿದೆ. ಇದನ್ನು ಗಮನಿಸಿದ ಜೀವರಕ್ಷಕ ದಳದವರು ಕೂಡಲೇ ಕಾರ್ಯಪ್ರವೃತರಾಗಿ, ಜಗದೀಶ್ (48) ಹಾಗೂ ಇತರ ಇಬ್ಬನ್ನು ರಕ್ಷಿಸಿದರೆಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News