ದೇವಸ್ಥಾನದ ಕೆರೆಗೆ ಬಿದ್ದು ಮೃತ್ಯು
Update: 2022-02-19 20:33 IST
ಬ್ರಹ್ಮಾವರ, ಫೆ.19: ಚಾಂತರು ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯ ನೀರಿಗೆ ವ್ಯಕ್ತಿಯೊಬ್ಬರು ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ದೇವಸ್ಥಾನದ ಸಮೀಪದ ನಿವಾಸಿ ರಾಘವೇಂದ್ರ ರಾವ್(67) ಎಂದು ಗುರುತಿಸಲಾಗಿದೆ. ಇವರು ಫೆ.18ರಂದು ಮಧ್ಯಾಹ್ನ ಮನೆಯಿಂದ ಹೊರಗೆ ಹೋದವರು, ಮಹಾಲಿಂಗೇಶ್ವರ ದೇವಸ್ಥಾನದ ಕೆರಯ ನೀರಿನಲ್ಲಿ ಕಾಲು ತೊಳೆಯುವ ಅಥವಾ ಮೀನಿಗೆ ಆಹಾರ ಹಾಕುವ ಸಮಯ ಆಕಸ್ಮಿಕ ವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಇವರ ಮೃತದೇಹ ಫೆ.19ರಂದು ಬೆಳಗ್ಗೆ ಪತ್ತೆಯಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.