ಜಮ್ಮು ಕಾಶ್ಮೀರ: ಎನ್ಕೌಂಟರ್ ನಲ್ಲಿ ಇಬ್ಬರು ಯೋಧರು ಹುತಾತ್ಮ

Update: 2022-02-19 17:27 GMT

ಶೋಪಿಯಾನ್, ಫೆ. 19: ಜಮ್ಮು ಹಾಗೂ ಕಾಶ್ಮೀರದ ಶೋಪಿಯಾನದ ಝೈನಪೋರಾ ಪ್ರದೇಶದ ಚೆರ್ಮಾರ್ಗ್ನಲ್ಲಿ ನಡೆದ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯ ಸಂದರ್ಭ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ದಕ್ಷಿಣ ಕಾಶ್ಮೀರದಲ್ಲಿ ಇಂದು ಮುಂಜಾನೆ ಆರಂಭವಾದ ಎನ್ಕೌಂಟರ್ನಲ್ಲಿ ಒರ್ವ ಶಂಕಿತ ಉಗ್ರ ಕೂಡ ಸಾವನ್ನಪ್ಪಿದ್ದಾನೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ. 

ಕಾರ್ಯಾಚರಣೆಯ ಸಂದರ್ಭ ಮೃತಪಟ್ಟ ಯೋಧರನ್ನು ಸಂತೋಷ್ ಯಾದವ್ ಹಾಗೂ ಚವನ್ ರೋಮಿತ್ ತಾನಾಜಿ ಎಂದು ಗುರುತಿಸಲಾಗಿದೆ. ಇವರಿಬ್ಬರೂ 1 ರಾಷ್ಟ್ರೀಯ ರೈಫಲ್ ದಳಕ್ಕೆ ಸೇರಿದವರು ಎಂದು ಅವರು ತಿಳಿಸಿದ್ದಾರೆ. ಶೋಪಿಯಾನದ ಝೈನಪೋರಾ ಪ್ರದೇಶದ ಚೆರ್ಮಾರ್ಗ್ನಲ್ಲಿ ಉಗ್ರರು ಇರುವ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಭದ್ರತಾ ಪಡೆ ಆ ಪ್ರದೇಶವನ್ನು ಸುತ್ತುವರಿದು ಕಾರ್ಯಾಚರಣೆ ಆರಂಭಿಸಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News