ತಾನೇನು ಧರಿಸಬೇಕೆಂಬುವುದು ಮಹಿಳೆಯ ನಿರ್ಧಾರವಾಗಿದೆ: ಹಿಜಾಬ್ ವಿವಾದದ ಕುರಿತು ಬಿಜೆಪಿ ವಿರುದ್ಧ ಕನಿಮೋಳಿ ಆಕ್ರೋಶ
Update: 2022-02-19 22:26 IST
ಚೆನ್ನೈ,ಫೆ.19: ಕರ್ನಾಟಕದಲ್ಲಿಯ ಹಿಜಾಬ್ ವಿವಾದ ಕುರಿತಂತೆ ಶನಿವಾರ ಬಿಜೆಪಿಯನ್ನು ತರಾಟೆಗೆತ್ತಿಕೊಂಡ ಡಿಎಂಕೆ ಸಂಸದೆ ಕನಿಮೋಳಿ ಅವರು,ಅದು ಜನರನ್ನು ಪರಸ್ಪರರ ವಿರುದ್ಧ ಎತ್ತಿ ಕಟ್ಟುತ್ತಿದೆ ಎಂದು ಆರೋಪಿಸಿದರು.
ತಾನು ಏನನ್ನು ಧರಿಸಬೇಕು ಎನ್ನುವುದನ್ನು ನಿರ್ಧರಿಸುವುದು ಮಹಿಳೆಯ ಹಕ್ಕು ಆಗಿದೆ ಎಂದು ಪ್ರತಿಪಾದಿಸಿದರು.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕನಿಮೋಳಿ, ಬಿಜೆಪಿ ಧರ್ಮದ ಹೆಸರಿನಲ್ಲಿ ಜನರನ್ನು ಪರಸ್ಪರ ಎತ್ತಿ ಕಟ್ಟುತ್ತಿರುವುದು ವಿಷಾದನೀಯವಾಗಿದೆ. ತಾನು ಏನನ್ನು ಧರಿಸಬೇಕು ಎಂದು ಆಯ್ಕೆ ಮಾಡಿಕೊಳ್ಳುವುದು ಮಹಿಳೆಯ ಹಕ್ಕು ಆಗಿದೆ. ಅದು ಅತಿಯಾಗಿದೆ ಅಥವಾ ಕಡಿಮೆಯಾಗಿದೆ ಎಂದು ನಿರ್ಧರಿಸುವ ಹಕ್ಕು ಯಾರಿಗೂ ಇಲ್ಲ ಎಂದರು.