×
Ad

ಪ್ರಕ್ಷೇಪಕ ಕ್ಷಿಪಣಿ ಸಹಿತ ಸೇನಾ ಕವಾಯತಿಗೆ ರಶ್ಯಾ ಅಧ್ಯಕ್ಷರ ಚಾಲನೆ ‌

Update: 2022-02-20 00:05 IST

ಮಾಸ್ಕೋ, ಫೆ.19: ಉಕ್ರೇನ್ನೊಂದಿಗಿನ ವಿವಾದ ಉಲ್ಬಣಿಸಿರುವಂತೆಯೇ ಬೆಲಾರೂಸ್ನಲ್ಲಿ ಶನಿವಾರ ಪ್ರಕ್ಷೇಪಕ ಕ್ಷಿಪಣಿಗಳನ್ನು ಒಳಗೊಂಡ ಸೇನಾ ಕವಾಯತಿಗೆ ರಶ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಚಾಲನೆ ನೀಡಿದ್ದು ತಾಲೀಮಿನಲ್ಲಿ ಪರಮಾಣು ಸಿಡಿತಲೆ ಕ್ಷಿಪಣಿಗಳನ್ನೂ ಪ್ರದರ್ಶಿಸಿರುವುದಾಗಿ ವರದಿಯಾಗಿದೆ ಕವಾಯತಿಗೆ ಚಾಲನೆ ದೊರಕಿದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹಾಗೂ ರಶ್ಯಾದ ಆರ್ಎನ್ಎ ನೊವೊಸ್ತಿ ಸುದ್ಧಿಸಂಸ್ಥೆ ವರದಿ ಮಾಡಿದೆ. ರಶ್ಯಾದ ಅಧ್ಯಕ್ಷ ಪುಟಿನ್ ಹಾಗೂ ಬೆಲಾರೂಸ್ ಮುಖಂಡ ಅಲೆಕ್ಸಾಂಡರ್ ಲುಕಶೆಂಕೊ ಕ್ರೆಮ್ಲಿನ್ನ ಕೊಠಡಿಯಲ್ಲಿ ಕವಾಯತನ್ನ ಪ್ರಸಾರವನು್ನ ವೀಕ್ಷಿಸಿದರು ಎಂದು ವರದಿ ತಿಳಿಸಿದೆ.

ಇದೊಂದು ವಾರ್ಷಿಕ ಸೇನಾ ಕವಾಯತು ಎಂದು ರಶ್ಯಾ ಪ್ರತಿಕ್ರಿಯಿಸಿದೆ. ಆದರೆ ಈ ಕವಾಯತು ತಪ್ಪು ಸಂದರ್ಭದಲ್ಲಿ ನಡೆಂುುತ್ತಿದೆ ಎಂದು ಅಮೆರಿಕ ವಿಶ್ಲೇಷಿಸಿದೆ.
 ಈ ಮಧ್ಯೆ, ಉಕ್ರೇನ್ ಗಡಿಭಾಗದಲ್ಲಿ ರಶ್ಯಾ ಸುಮಾರು 1,90,000 ಯೋಧರನ್ನು ಜಮಾವಣೆಗೊಳಿಸಿರುವುದು ದೃಢಪಟ್ಟಿದ್ದು ದ್ವಿತೀಯ ಮಹಾಯುದ್ಧದ ಬಳಿಕದ ಯುರೋಪ್ನಲ್ಲಿನ ಅತ್ಯಂತ ಬೃಹತ್ ಸೇನಾ ಜಮಾವಣೆ ಇದಾಗಿದೆ ಎಂದು ಯುರೋಪ್ನಲ್ಲಿನ ಭದ್ರತೆ ಮತ್ತು ಸಹಕಾರ ಸಂಸ್ಥೆಗೆ ಅಮೆರಿಕದ ರಾಯಭಾರಿ ಮೈಕೆಲ್ ಕಾರ್ಪೆಂಟರ್ ಹೇಳಿದ್ದಾರೆ. ಸೇನೆಯ ಕವಾಯತು ಎಂದು ಹೇಳಿ ಭೋಸೇನೆ, ವಾಯಪಡೆಯ ಬೃಹತ್ ತುಕಡಿಗಳನ್ನು ನೆಲೆಗೊಳಿಸುವ ಮೂಲಕ ರಶ್ಯಾ ಜಗತ್ತನ್ನು ವಂಚಿಸುತ್ತಿದೆ ಎಂದವರು ಆರೋಪಿಸಿದ್ದಾರೆ. ರಶ್ಯಾವು ನಕಲಿ ಕವಾಯತಿನ ಮೂಲಕ ನೈಜ ಜೈವಿಕ ಅಸ್ತ್ರ ಬಳಸಿ ಯುದ್ಧ ನಡೆಸುವ ಸಾಧ್ಯತೆಯಿದೆ. ಒಂದು ವೇಳೆ ರಶ್ಯಾ ಆಕ್ರಮಣ ನಡೆಸದಿದ್ದರೆ ಆಗ ರಶ್ಯಾ ತನ್ನ ತಂತ್ರವನ್ನು ಬದಲಾಯಿಸಿದೆ ಮತ್ತು ನಮ್ಮ ಊಹೆ, ಲೆಕ್ಕಾಚಾರ ಸುಳ್ಳೆಂದು ನಾವು ಭಾವಿಸುತ್ತೇವೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹೇಳಿದ್ದಾರೆ. ಅಮೆರಿಕಕ್ಕೆ ಮುಖಭಂಗ ಉಂಟುಮಾಡಲು ಮತ್ತು ಅಪಖ್ಯಾತಿ ತರಲು ಪುಟಿನ್ ಆಕ್ರಮಣದ ಸಾಧ್ಯತೆಯನ್ನು ಬಿಂಬಿಸುವ ನಾಟಕ ಆಡುತ್ತಿದ್ದಾರೆ. ರಶ್ಯಾ ಶೀಘ್ರ ಆಕ್ರಮಣ ನಡೆಸಲಿದೆ ಎಂದು ಅಮೆರಿಕದ ಬಾಯಲ್ಲಿ ಪದೇ ಪದೇ ಹೇಳಿಸಿ, ಆಕ್ರಮಣದಿಂದ ದೂರ ಉಳಿದು ಅಮೆರಿಕದ ಗುಪ್ತಚರ ಇಲಾಖೆ ಹಾಗೂ ಅಮೆರಿಕದ ಆಡಳಿತದ ವಿಶ್ವಾಸಾರ್ಹತೆಯನ್ನು ಕುಂದಿಸುವ ಮತ್ತು ಆ ದೇಶಕ್ಕೆ ಮುಖಭಂಗ ಉಂಟು ಮಾಡುವ ಉದ್ದೇಶ ರಶ್ಯದ್ದಾಗಿದೆ ಎಂದೂ ಕೆಲವು ಮಾಧ್ಯಮಗಳು ವಿಶ್ಲೇಷಿಸಿವೆ.
ಪೂರ್ವ ಉಕ್ರೇನ್ನ ಗಡಿಭಾಗದ ನಗರದಲ್ಲಿ ಹಲವು ಬಾರಿ ಗುಂಡು ಹಾರಾಟದ ಸದ್ದು ಕೇಳಿಬಂದಿದ್ದು ಈ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ರಶ್ಯನ್ ಭಾಷೆ ಮಾತನಾಡುವವರು ಯಾವುದೇ ಸಮಯದಲ್ಲೂ ರಶ್ಯಾದತ್ತ ವಾಲಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಮಧ್ಯೆ, ಉಕ್ರೇನ್ ವಿವಾದಕ್ಕೆ ರಶ್ಯಾ ಕಾರಣ ಎಂದು ಅಮೆರಿಕ ಸಹಿತ ನೇಟೊ ಪಡೆ ಆರೋಪಿಸಿದರೆ, ಈ ಹಿಂದಿನ ಸೋವಿಯತ್ ಯೂನಿಯನ್ನ ಭಾಗವಾಗಿದ್ದ ಉಕ್ರೇನ್ನಲ್ಲಿ ಅಮೆರಿಕ ಮತ್ತು ನೇಟೊ ನಡೆಸುತ್ತಿರುವ ಹಸ್ತಕ್ಷೇಪದಿಂದ ರಶ್ಯಾದ ಭದ್ರತೆಗೆ ತೀವ್ರ ಅಪಾಯವಿದೆ ಎಂದು ರಶ್ಯಾ ಮ್ತದರ ಮಿತ್ರರಾಷ್ಟ್ರಗಳು ದೂರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News