ಹೈಪರ್ಸಾನಿಕ್ ಕ್ಷಿಪಣಿ ಪರೀಕ್ಷೆ ನಡೆಸಿದ ರಶ್ಯಾ
Update: 2022-02-20 00:12 IST
ಮಾಸ್ಕೋ, ಫೆ.19: ಬೆಲಾರೂಸ್ನಲ್ಲಿ ರಶ್ಯಾ ಶನಿವಾರ ನಡೆಸಿದ ಯೋಜಿತ ಸೇನಾ ಕವಾಯತಿನ ಸಂದರ್ಭ ಅತ್ಯಾಧುನಿಕ ಹೈಪರ್ಸಾನಿಕ್, ಕ್ರೂಸ್ ಮತ್ತು ಪರಮಾಣು ಸಾಮರ್ಥ್ಯದ ಪ್ರಕ್ಷೇಪಕ ಕ್ಷಿಪಣಿಗಳ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ ಎಂದು ರಶ್ಯಾದ ಅಧಿಕಾರಿಗಳು ಹೇಳಿದ್ದಾರೆ.
ಈ ಕವಾಯತಿನಲ್ಲಿ ಟಿಯು 95 ಬಾಂಬರ್ ವಿಮಾನ ಹಾಗೂ ಸಬ್ಮೆರೀನ್ ಪಾಲ್ಗೊಂಡಿದ್ದವು. ಎಲ್ಲಾ ಕ್ಷಿಪಣಿಗಳೂ ನಿಗದಿತ ಗುರಿಗೆ ಅಪ್ಪಳಿಸುವುದರೊಂದಿಗೆ ತಮ್ಮ ಸಾಮರ್ಥ್ಯವನ್ನು ದೃಢಪಡಿಸಿವೆ. ನಮ್ಮ ಕಾರ್ಯತಂತ್ರದ ಆಕ್ರಮಣಕಾರಿ ಪಡೆಗಳ ಕಾರ್ಯಕ್ಷಮತೆಯನ್ನು ಪರಿಪೂರ್ಣಗೊಳಿಸವುದು ಈ ಕವಾಯತ್ನ ಪ್ರಮುಖ ಉದ್ದೇಶವಾಗಿತ್ತು ಎಂದು ರಶ್ಯಾದ ಸೇನಾಪಡೆಗಳ ಮುಖ್ಯಸ್ಥ ವಲೆರಿ ಗೆರಾಸಿಮೋವ್ ಹೇಳಿದ್ದಾರೆ.
2 ಹಂತಗಳಲ್ಲಿ ಸೇನಾ ಕವಾಯತು ನಡೆದಿದೆ. ಅಧ್ಯಕ್ಷ ಪುಟಿನ್ ಮತ್ತು ಬೆಲಾರೂಸ್ ಅಧ್ಯಕ್ಷರು ನೇರಪ್ರಸಾರದಲ್ಲಿ ಈ ಕವಾಯತು ವೀಕ್ಷಿಸಿದು ಎಂದು ಗೆರಾಸಿಮೋವ್ ಹೇಳಿದ್ದಾರೆ.