ಸೊಮಾಲಿಯಾ: ಆತ್ಮಹತ್ಯಾ ಬಾಂಬ್ ದಾಳಿಗೆ ಕನಿಷ್ಟ 13 ಮಂದಿ ಮೃತ್ಯು
Update: 2022-02-20 00:14 IST
ಮೊಗದಿಶು, ಫೆ.19: ಮಧ್ಯ ಸೊಮಾಲಿಯಾದ ರೆಸ್ಟಾರೆಂಟ್ನಲ್ಲಿ ಶನಿವಾರ ಆತ್ಮಹತ್ಯಾ ಬಾಂಬರ್ ತನ್ನನ್ನು ತಾನೇ ಸ್ಫೋಟಿಸಿಕೊಂಡಾಗ ಕನಿಷ್ಟ 13 ಮಂದಿ ಮೃತಪಟ್ಟಿದ್ದು ಇತರ 20 ಮಂದಿ ಗಾಯಗೊಂಡಿುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಬೆಲ್ಡೆವೆಯ್ನ ನಗರದ ರೆಸ್ಟಾರೆಂಟ್ ನಲ್ಲಿ ಈ ಸ್ಫೋಟ ಸಂಭವಿಸಿದ್ದು ಈ ಸಂದರ್ಭ ರೆಸ್ಟಾರೆಂಟ್ ಗ್ರಾಹಕರಿಂದ ತುಂಬಿತ್ತು. ಬಾಂಬ್ ಸ್ಫೋಟದಿಂದ ಭಾರೀ ಹಾನಿಯಾಗಿದೆ ಎಂದು ಪೊಲೀಸ್ ಇಲಾಖೆಯ ವಕ್ತಾರ ಡಿನಿ ರೊಬಲ್ ಅಹ್ಮದ್ ಹೇಳಿದ್ದಾರೆ. ಬೆಲ್ಡೆವೆಯ್ನಾ ನಗರದಲ್ಲಿ ಸಂಸದೀಯ ಚುನಾವಣೆಯ ಪ್ರಥಮ ಹಂತದ ಚುನಾವಣೆಯ ಮತದಾನದ ಹಿನ್ನೆಲೆಯಲ್ಲಿ ಭಾರೀ ಭದ್ರತೆ ವ್ಯವಸ್ಥೆ ಮಾಡಿದ್ದ ಸಂದರ್ಭದಲ್ಲೇ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದೆ.
ಆತ್ಮಹತ್ಯಾ ಬಾಂಬ್ ದಾಳಿ ನಡೆದಿರುವುದನ್ನು ಪೊಲೀಸರು ಹಾಗೂ ಸರಕಾರದ ಅಧಿಕಾರಿಗಳು ದೃಢಪಡಿಸಿದ್ದಾರೆ.