"ಭಯೋತ್ಪಾದಕರು ಸೈಕಲ್ ಆಯ್ಕೆ ಮಾಡಿಕೊಳ್ಳುತ್ತಾರೆ" ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಅಖಿಲೇಶ್ ತಿರುಗೇಟು

Update: 2022-02-21 06:22 GMT

ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ "ಭಯೋತ್ಪಾದಕರು ಸೈಕಲ್ ಆಯ್ಕೆ ಮಾಡಿಕೊಳ್ಳುತ್ತಾರೆ" ಎಂಬ ಹೇಳಿಕೆಗೆ ತಿರುಗೇಟು ನೀಡಿರುವ ಅಖಿಲೇಶ್ ಯಾದವ್ "ಸೈಕಲ್‌ಗೆ ಮಾಡಿದ ಅವಮಾನ ಇಡೀ ರಾಷ್ಟ್ರಕ್ಕೆ ಮಾಡಿದ ಅವಮಾನ" ಎಂದು ಹೇಳಿದ್ದಾರೆ.

 'ಸೈಕಲ್' ಸಮಾಜವಾದಿ  ಪಕ್ಷದ ಚುನಾವಣಾ ಚಿಹ್ನೆಯಾಗಿದೆ. ಇದು "ಜನ ಸಾಮಾನ್ಯರ ಸವಾರಿಯಾಗಿದ್ದು, ಹಳ್ಳಿಗಳ ಹೆಮ್ಮಯಾಗಿದೆ. ಸೈಕಲ್  ರೈತರನ್ನು ಅವರ ಹೊಲಗಳಿಗೆ ಸಂಪರ್ಕಿಸುತ್ತದೆ.  ಸಮೃದ್ಧಿಯ ಅಡಿಪಾಯವನ್ನು ಹಾಕುತ್ತದೆ. ಸೈಕಲ್ ನಮ್ಮ ಹೆಣ್ಣುಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತದೆ.  ಸಾಮಾಜಿಕ ನಿರ್ಬಂಧಗಳನ್ನು ಮೀರಿದೆ.  ಅದು ಹಣದುಬ್ಬರದಿಂದ ಅಸ್ಪೃಶ್ಯವಾಗಿ ಮುನ್ನಡೆಯುತ್ತದೆ.  ಸೈಕಲ್ ಸಾಮಾನ್ಯರ ಸವಾರಿ, ಗ್ರಾಮೀಣ ಭಾರತದ ಹೆಮ್ಮೆ. ಸೈಕಲ್‌ಗೆ ಮಾಡಿದ ಅವಮಾನ ಇಡೀ ರಾಷ್ಟ್ರಕ್ಕೆ ಮಾಡಿದ ಅವಮಾನ'' ಎಂದು ಶಾಲಾ ಬಾಲಕನೊಬ್ಬ ಸೈಕಲ್‌ ಮೇಲೆ ಸವಾರಿ ಮಾಡುತ್ತಿದ್ದು, ಆಟಿಕೆ ವಿಮಾನವನ್ನು ನೋಡಿ ನಗುತ್ತಿರುವ ಚಿತ್ರದ ಜೊತೆಗೆ  ಅಖಿಲೇಶ್‌ ಯಾದವ್‌ ಟ್ವೀಟ್‌ ಮಾಡಿದ್ದಾರೆ.

2008ರ ಅಹಮದಾಬಾದ್ ಸರಣಿ ಸ್ಫೋಟದಲ್ಲಿ ಶುಕ್ರವಾರದಂದು 49 ಮಂದಿ ದೋಷಿಗಳಾಗಿರುವ ಸಂದರ್ಭದಲ್ಲಿ  ರವಿವಾರ ಸಮಾಜವಾದಿ ಪಕ್ಷದ ಚುನಾವಣಾ ಚಿಹ್ನೆಯನ್ನು ಭಯೋತ್ಪಾದಕರಿಗೆ ಜೋಡಿಸುವ ಮೂಲಕ ಪ್ರಧಾನಿ ಮೋದಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News