×
Ad

​ಫೆ.25-27: ಉಡುಪಿಯಲ್ಲಿ ಮುರಾರಿ-ಕೆದ್ಲಾಯ ರಂಗೋತ್ಸವ

Update: 2022-02-21 18:46 IST

ಉಡುಪಿ: ಉಡುಪಿ ಸಾಂಸ್ಕೃತಿಕ ವೇದಿಕೆ ರಥಬೀದಿ ಗೆಳೆಯರು ಸಂಸ್ಥೆಯ ಆಶ್ರಯದಲ್ಲಿ ಡಾ. ನಿ.ಮುರಾರಿ ಬಲ್ಲಾಳ್, ಪ್ರೊ.ಕೆ.ಎಸ್.ಕೆದ್ಲಾಯ ನೆನಪಿನ ಮುರಾರಿ-ಕೆದ್ಲಾಯ ರಂಗೋತ್ಸವ ಫೆ.25, 26, 27ರಂದು ಪ್ರತಿದಿನ ಸಂಜೆ 7:00ಗಂಟೆಗೆ ಉಡುಪಿ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಲಿದೆ.

ಫೆ.25ರ ಶುಕ್ರವಾರ ಸಂಜೆ 6:15ಕ್ಕೆ ರಂಗೋತ್ಸವವನ್ನು ಖ್ಯಾತ ಯುವ ರಂಗ ನಿರ್ದೇಶಕ ಲಕ್ಷ್ಮಣ ಕೆ.ಪಿ. ನೆಲಮಂಗಲ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿ ಗಳಾಗಿ ಉಡುಪಿ ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲ್ ಡಾ.ದೇವಿದಾಸ್ ಎಸ್. ನಾಯ್ಕಾ ಮತ್ತು ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಭಾಗವಹಿಸಲಿರುವರು. ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಸವಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಕೊನೆಯಲ್ಲಿ ರಂಗಾಯಣ ಶಿವಮೊಗ್ಗ ಕಲಾವಿದರಿಂದ ‘ದ ಪೀಪಲ್ ಆಫ್ ಇಂಡಿಯಾ’ (ರಚನೆ:ಡಾ.ರಾಜಪ್ಪ ದಳವಾಯಿ, ನಿರ್ದೇಶನ: ಲಕ್ಷ್ಮಣ ಕೆ.ಪಿ.) ಕ್ನಡ ನಾಟಕ ಪ್ರದರ್ಶನಗೊಳ್ಳಲಿದೆ.

ಫೆ.26ರ ಶನಿವಾರ ಮೈಸೂರಿನ ನಾಟ್ಯಶಿವ ಕಲಾವಿದರಿಂದ ‘ಐ ಡ್ರೀಮ್ ಬಿಫೋರ್ ಐ ಟೇಕ್ ದಿ ಸ್ಟ್ಯಾಂಡ್’ (ಮೂಲ: ಅರ್ಲೆನ್ ಹಟನ್, ಕನ್ನಡಕ್ಕೆ: ಪ್ರತಿಭಾ ನಂದ ಕುಮಾರ್, ಪರಿಕಲ್ಪನೆ/ ನಿರ್ದೇಶನ : ಸಾಲಿಯಾನ್ ಉಮೇಶ್ ನಾರಾಯಣ್) ಕನ್ನಡ ನಾಟಕ ಮತ್ತು ಫೆ.27ರ ರವಿವಾರ ಕೇರಳದ ಲಿಟ್ಲ್ ಅರ್ಥ್ ಸ್ಕೂಲ್ ಆಫ್ ಥಿಯೇಟರ್ ಆರ್ಟ್ ಕಲಾವಿದರಿಂದ ಬೊಲಿಯನ್ ಸ್ಟಾರ್ಸ್‌ (ಮೂಲ ಕಥೆ: ಪಿ.ವಿ.ಶಾಜಿ ಕುಮಾರ್, ರಂಗ ರೂಪ/ವಿನ್ಯಾಸ/ ನಿರ್ದೇಶನ: ಅರುಣ್‌ಲಾಲ್) ಮಲೆಯಾಳಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಸ್ಥೆಯ ನಾಟಕ ವಿಭಾಗದ ಸಂಚಾಲಕರಾದ ಸಂತೋಷ್ ಶೆಟ್ಟಿ ಹಿರಿಯಡ್ಕ ಮತ್ತು ಸಂತೋಷ್ ನಾಯಕ್ ಪಟ್ಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News