×
Ad

ಹೋಟೆಲ್‌ನ ಬಾತ್‌ರೂಂನಲ್ಲಿದ್ದ ಗೀಸರ್‌ನಿಂದ ಗ್ಯಾಸ್ ಸೋರಿಕೆ: ಓರ್ವನ ಸಾವು

Update: 2022-02-21 21:13 IST
ಗುರುಗ್ರಾಮ

ಗುರುಗ್ರಾಮ,ಫೆ.21: ಇಲ್ಲಿಯ ಹೋಟೆಲ್‌ವೊಂದರ ಕೊಠಡಿಯ ಬಾತರೂಮ್‌ನಲ್ಲಿ ಗೀಸರ್‌ನಿಂದ ಅನಿಲ ಸೋರಿಕೆಯಾದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ. ಹೋಟೆಲ್‌ನ ಮಾಲಿಕ ಮತ್ತು ಮ್ಯಾನೇಜರ್ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಆರ್ಮಿ ಮೆಡಿಕಲ್ ಕಾರ್ಪ್ಸ್‌ನ ಉದ್ಯೋಗಿ ಪಂಕಜ ಕಪೂರ್ ತನ್ನ ಸ್ನೇಹಿತರೊಂದಿಗೆ ಉತ್ತರಾಖಂಡ ಪ್ರವಾಸ ಕೈಗೊಂಡಿದ್ದರು. ಫೆ.19ರಂದು ಗುರುಗ್ರಾಮಕ್ಕೆ ಆಗಮಿಸಿದ್ದ ಅವರು ಹೋಟೆಲ್‌ನಲ್ಲಿ ತಂಗಿದ್ದರು. ಅವರ ಪೈಕಿ ಸತ್‌ದೇವ ಎಂಬಾತ ಸ್ನಾನಕ್ಕೆ ತೆರಳಿದ್ದು,ಈ ವೇಳೆ ಗ್ಯಾಸ್ ಗೀಸರ್‌ನಿಂದ ಅನಿಲ ಸೋರಿಕೆಯಾಗಿ ಸಾವನ್ನಪ್ಪಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News