ರಷ್ಯಾ ವಿರುದ್ಧ ಅಮೆರಿಕ ನಿರ್ಬಂಧ

Update: 2022-02-23 02:33 GMT

ವಾಷಿಂಗ್ಟನ್: ರಷ್ಯಾಗೆ ಪಾಶ್ಚಿಮಾತ್ಯ ದೇಶಗಳ ನೆರವನ್ನು ಸ್ಥಗಿತಗೊಳಿಸಿ, ರಷ್ಯಾ ಹಾಗೂ ಮಿತ್ರದೇಶಗಳ ವಿರುದ್ಧ ನಿರ್ಬಂಧಗಳನ್ನು ಅಮೆರಿಕ ಅಧ್ಯಕ್ಷ ಜೋ ಬೈಡೇನ್ ಘೋಷಿಸಿದ್ದಾರೆ. ಉಕ್ರೇನ್ ಮೇಲಿನ ರಷ್ಯಾ ದಾಳಿಯ ವಿರುದ್ಧ ಮೊದಲ ದಂಡನಾ ಕ್ರಮ ಇದಾಗಿದೆ.

ಉಕ್ರೇನ್‌ನ ಒಳಗೆ ರಷ್ಯಾ ದಾಳಿ ಮಾಡಿದಂತೆಲ್ಲ ಮತ್ತಷ್ಟು ಬಿಗಿ ನಿರ್ಬಂಧಗಳನ್ನು ಹೇರಲಾಗುವುದು ಎಂದು ಶ್ವೇತಭವನದಲ್ಲಿ ಮಾತನಾಡಿದ ಬೈಡೇನ್ ಸ್ಪಷ್ಟಪಡಿಸಿದರು. "ನೀವು ಮತ್ತಷ್ಟು ಮುಂದುವರಿದರೆ, ನಮ್ಮಲ್ಲಿ ಮತ್ತಷ್ಟು ನಿರ್ಬಂಧ ಕ್ರಮಗಳಿವೆ" ಎಂದು ಎಚ್ಚರಿಕೆ ನೀಡಿದರು. ರಷ್ಯಾದ ಪ್ರತಿಯೊಂದು ಹೆಜ್ಜೆಯೂ ಉಕ್ರೇನ್ ಮೇಲಿನ ದಾಳಿಗೆ ಕುಮ್ಮಕ್ಕು ನೀಡುವಂಥದ್ದು ಎಂದು ಹೇಳಿದರು.

ರಷ್ಯಾದ ಕ್ರಮವು ಅಂತರರಾಷ್ಟ್ರೀಯ ಕಾನೂನುಗಳ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದ ಅವರು, ಅಮೆರಿಕ ಮತ್ತು ಮಿತ್ರಪಡೆಗಳ ಪ್ರತಿಕ್ರಿಯೆಯನ್ನು ಇದು ಆಹ್ವಾನಿಸಿದೆ ಎಂದು ಅಭಿಪ್ರಾಯಪಟ್ಟರು. ಪುಟಿನ್ ಅವರು ಉಕ್ರೇನ್‌ನ ಅಸ್ತಿತ್ವನ್ನೇ ಪ್ರಶ್ನಿಸಿದ್ದಾರೆ ಎಂದು ಆಪಾದಿಸಿದ ಅವರು, ರಷ್ಯಾ ನಿಸ್ಸಂದೇಹವಾಗಿ ದಾಳಿಕೋರ ರಾಷ್ಟ್ರ ಎಂದು ಬಣ್ಣಿಸಿದರು.

ರಷ್ಯಾದ ನೆರೆ ರಾಷ್ಟ್ರವಾದ ಬಾಲ್ಟಿಕ್‌ಗೆ ಅಮೆರಿಕದ ಪಡೆಗಳನ್ನು ಸ್ವಲ್ಪಮಟ್ಟಿಗೆ ಕಳುಹಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಅಮೆರಿಕ ರಷ್ಯಾದ ಜತೆ ಯುದ್ಧ ಮಾಡಲು ಬಯಸಿಲ್ಲ, ಆದರೆ ನ್ಯಾಟೊ ಪ್ರದೇಶದ ಪ್ರತಿ ಇಂಚನ್ನೂ ನಾವು ರಕ್ಷಿಸಲಿದ್ದೇವೆ. ಉಕ್ರೇನ್‌ ಗೆ ರಕ್ಷಣಾತ್ಮಕ ಸಾಧನ ಸಲಕರಣೆಗಳನ್ನೂ ಒದಗಿಸಲಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News