"ಪುಂಡರಂತೆ ವರ್ತಿಸುತ್ತಿದ್ದಾರೆ": ಆಸ್ಟ್ರೇಲಿಯಾ, ಜಪಾನ್‌ನಿಂದ ರಶ್ಯಾ ವಿರುದ್ಧ ನಿರ್ಬಂಧ ಜಾರಿ

Update: 2022-02-23 18:41 GMT

ಟೋಕಿಯೊ, ಫೆ.23: ಉಕ್ರೇನ್ ವಿರುದ್ಧ ರಶ್ಯಾದ ಆಕ್ರಮಣವನ್ನು ಜಾಗತಿಕ ಮುಖಂಡರು ಕಟು ಶಬ್ದಗಳಲ್ಲಿ ಖಂಡಿಸಿದ್ದು, ರಶ್ಯಾದ ವಿರುದ್ಧ ಆರ್ಥಿಕ, ವ್ಯಾಪಾರ ಮತ್ತು ಪ್ರವಾಸ ನಿರ್ಬಂಧ ವಿಧಿಸುವ ಮೂಲಕ ಯುದ್ಧದ ಅಂಚಿನಿಂದ ಹಿಂದೆ ಸರಿಯುವಂತೆ ರಶ್ಯಾದ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ.

 ರಶ್ಯಾದವರು ಪುಂಡರಂತೆ ಮತ್ತು ಬೆದರಿಕೆ ಒಡ್ಡುವವರಂತೆ ವರ್ತಿಸುತ್ತಿದ್ದಾರೆ. ಅವರನ್ನು ಪುಂಡರು ಎಂದೇ ಕರೆಯಬಹುದು ಎಂದು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದು , ಪ್ರಥಮ ಹಂತದ ಕ್ರಮವಾಗಿ ರಶ್ಯಾ ವಿರುದ್ಧ ಉದ್ದೇಶಿತ ಆರ್ಥಿಕ ನಿರ್ಬಂಧ ಮತ್ತು ಪ್ರಯಾಣ ನಿಷೇಧವನ್ನು ಘೋಷಿಸಿದ್ದಾರೆ.

 ರಶ್ಯಾ ಹಾಗೂ ಉಕ್ರೇನ್ನ 2 ಪ್ರತ್ಯೇಕಗೊಂಡ ಪ್ರಾಂತಗಳ ವಿರುದ್ಧ ಆರ್ಥಿಕ ದಿಗ್ಬಂಧನ ವಿಧಿಸುವುದಾಗಿ ಜಪಾನ್ ಪ್ರಧಾನಿ ಫುಮಿಯೊ ಕಿಷಿಡಾ ಹೇಳಿದ್ದಾರೆ. ಜಪಾನ್ನಲ್ಲಿ ರಶ್ಯಾ ಸರಕಾರದ ಬಾಂಡ್ಗಳ ಮಾರಾಟವನ್ನು ನಿಷೇಧಿಸಲಾಗಿದೆ. ಉಕ್ರೇನ್ನಿಂದ ಪ್ರತ್ಯೇಕಗೊಂಡಿರುವ 2 ಪ್ರಾಂತಗಳಿಗೆ ಸಂಬಂಧಿಸಿದ ಜನತೆಗೆ ವೀಸಾ ನೀಡುವುದನ್ನು ನಿಲ್ಲಿಸಲಾಗಿದೆ ಮತ್ತು ಆ ಪ್ರಾಂತಗಳ ಸರಕಾರ ಜಪಾನ್ನಲ್ಲಿ ಹೊಂದಿರುವ ಆಸ್ತಿಗಳನ್ನು ಸ್ಥಂಭನಗೊಳಿಸುವುದಾಗಿ ಅವರು ಹೇಳಿದ್ದಾರೆ. ಪರಿಸ್ಥಿತಿ ಮತ್ತಷ್ಟು ಹದಗೆಟ್ಟರೆ ಇನ್ನಷ್ಟು ನಿಬರ್ಂಧ ಹೇರಲಾಗುವುದು ಎಂದ ಅವರು, ಉಕ್ರೇನ್ನಲ್ಲಿರುವ ಸುಮಾರು 120 ಜಪಾನೀಯರ ತೆರವು ಕಾರ್ಯಾಚರಣೆಗೆ ನೆರವಾಗಲು

  ಪಶ್ಚಿಮ ಉಕ್ರೇನ್ನ ಲಿವಿವ್ ನಗರದಲ್ಲಿ ತಾತ್ಕಾಲಿಕ ಕಚೇರಿಯನ್ನು ಆರಂಭಿಸಲಾಗಿದ್ದು, ಸಮೀಪದ ದೇಶಗಳಿಂದ ಬಾಡಿಗೆ ವಿಮಾನದ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ. ಈ ಮಧ್ಯೆ, ಇಂಧನ ಹಾಗೂ ತೈಲದ ಬೇಡಿಕೆ ಈಡೇರಿಸಲು ಆಮದನ್ನೇ ಅವಲಂಬಿಸಿರುವ ದಕ್ಷಿಣ ಕೊರಿಯಾ, ಉಕ್ರೇನ್ ಬಿಕ್ಕಟ್ಟಿನಿಂದ ದೇಶದ ಆರ್ಥಿಕತೆಯ ಮೇಲೆ ಆಗುವ ಪರಿಣಾಮಗಳನ್ನು ಚರ್ಚಿಸಲು ಬುಧವಾರ ಅಧಿಕಾರಿಗಳ ತುರ್ತು ಸಭೆ ನಡೆಸಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News