×
Ad

ಪುಟಿನ್ ರೊಂದಿಗೆ ಮೋದಿಜಿ ಮಾತನಾಡಿದರೆ ಅವರು ಪ್ರತಿಕ್ರಿಯಿಸುತ್ತಾರೆ: ಭಾರತದ ಉಕ್ರೇನ್ ರಾಯಭಾರಿ ವಿಶ್ವಾಸ

Update: 2022-02-24 15:28 IST

ಹೊಸದಿಲ್ಲಿ: ಇಂದು ಬೆಳಗ್ಗೆ ರಷ್ಯಾ-ಉಕ್ರೇನ್ ಸಶಸ್ತ್ರ ಸಂಘರ್ಷ ಆರಂಭವಾಗಿದ್ದು, ಭಾರತದಲ್ಲಿರುವ ಉಕ್ರೇನ್ ರಾಯಭಾರಿ ಇಗೊರ್ ಪೊಲಿಖಾ ಭಾರತದ ಮಧ್ಯಪ್ರವೇಶವನ್ನು ಕೋರಿದ್ದಾರೆ.

ಪರಿಸ್ಥಿತಿ ಹತೋಟಿ ಮೀರಬಹುದು ಎಂದು ಹೇಳಿರುವ ಪೊಲಿಖಾ, "ಮೋದಿ ಜಿ ಅತ್ಯಂತ ಶಕ್ತಿಶಾಲಿ, ಗೌರವಾನ್ವಿತ ವಿಶ್ವ ನಾಯಕರಲ್ಲಿ ಒಬ್ಬರು. ನೀವು ರಷ್ಯಾದೊಂದಿಗೆ ವಿಶೇಷ, ಕಾರ್ಯತಂತ್ರದ ಸಂಬಂಧವನ್ನು ಹೊಂದಿದ್ದೀರಿ. ಮೋದಿಜಿ, ಪುಟಿನ್ ಅವರೊಂದಿಗೆ ಮಾತನಾಡಿದರೆ ಅವರು ಪ್ರತಿಕ್ರಿಯಿಸುತ್ತಾರೆ ಎಂದು ನಾವು ಭಾವಿಸುತ್ತೇವೆ " ಎಂದರು.

"ಭಾರತವು ರಷ್ಯಾದೊಂದಿಗಿನ  ವಿಶೇಷಾಧಿಕಾರದ   ಸಂಬಂಧವನ್ನು ಗಮನ ದಲ್ಲಿಟ್ಟುಕೊಂಡು ಭಾರತವು ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಕೇವಲ ನಮ್ಮ ಸುರಕ್ಷತೆಗಾಗಿ ಅಲ್ಲ, ನಿಮ್ಮ ಸ್ವಂತ ನಾಗರಿಕರ ಸುರಕ್ಷತೆ ವಿಚಾರದಲ್ಲಿಯೂ ಕೂಡ  ನಮಗೆ ಭಾರತದ ಹಸ್ತಕ್ಷೇಪದ ಅಗತ್ಯವಿದೆ.  ನಮಗೆ ಶಿಷ್ಟಾಚಾರದ  ಹೇಳಿಕೆಗಳು ಬೇಡ. ಅದರಲ್ಲಿ ಏನೂ ಅರ್ಥವಲ್ಲ. ನಮಗೆ ಇಡೀ ಪ್ರಪಂಚದ ಬೆಂಬಲ ಬೇಕು’’ ಎಂದು ಪೊಲಿಖಾ ಹೇಳಿದರು.

ಒಂದು  ಅಂದಾಜಿನ ಪ್ರಕಾರ ಪ್ರಸ್ತುತ 15,000 ಕ್ಕೂ ಹೆಚ್ಚು ಭಾರತೀಯರು ಉಕ್ರೇನ್‌ನಲ್ಲಿ ವಾಸಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News