ಉಡುಪಿ: ನೂತನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿ ದಿನೇಶ್ ಹೆಗ್ಡೆ ನೇಮಕ
Update: 2022-02-24 21:16 IST
ಉಡುಪಿ, ಫೆ.24: ನೂತನವಾಗಿ ಸ್ಥಾಪಿಸಲ್ಪಟ್ಟು, ಇತ್ತೀಚಿಗೆ ಉದ್ಘಾಟನೆಗೊಂಡ ಉಡುಪಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾಗಿ ದಿನೇಶ್ ಹೆಗ್ಡೆ ಇವರನ್ನು ರ್ನಾಟಕ ಉಚ್ಚ ನ್ಯಾಯಾಲಯ ನೇಮಿಸಿದೆ.
ಉಡುಪಿಗೆ ವರ್ಗಾವಣೆಗೊಳ್ಳುವ ಮುನ್ನ ದಿನೇಶ್ ಹೆಗ್ಡೆ ಇವರು ಬೆಂಗಳೂರು ನಗರದ 19ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಜಡ್ಜ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಹೆಗ್ಡೆ ಅವರು ವಾರದಲ್ಲಿ 2 ದಿನ (ಪ್ರತಿ ಸೋಮವಾರ, ಮಂಗಳವಾರ) ಕಾರ್ಕಳದಲ್ಲಿ ಮತ್ತು ವಾರದ ಉಳಿದ ದಿನಗಳಂದು ಉಡುಪಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.