×
Ad

ರಶ್ಯ ನನ್ನನ್ನು ನಂಬರ್ ಒನ್ ಟಾರ್ಗೆಟ್ ಎಂದು ಗುರುತಿಸಿದರೂ ರಾಜಧಾನಿಯಲ್ಲೇ ಇರುತ್ತೇನೆ: ಉಕ್ರೇನ್ ಅಧ್ಯಕ್ಷ

Update: 2022-02-25 12:18 IST
Photo: PTI

ಕೀವ್: ಎರಡನೆಯ ಮಹಾಯುದ್ಧದ ನಂತರ ಯುರೋಪಿಯನ್ ರಾಜ್ಯದ ಮೇಲೆ ನಡೆದ ಅತಿದೊಡ್ಡ ದಾಳಿಯಲ್ಲಿ ರಾಜಧಾನಿಯತ್ತ ಮುನ್ನುಗ್ಗುತ್ತಿರುವ ರಷ್ಯಾದ ಆಕ್ರಮಣಕಾರರ ವಿರುದ್ಧ ತನ್ನ ಪಡೆಗಳು ಹೋರಾಡುತ್ತಿರುವಾಗ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿ ತಾನು ಕೀವ್ ನಲ್ಲಿ ಉಳಿಯುವುದಾಗಿ ಶುಕ್ರವಾರ ಪ್ರತಿಜ್ಞೆ ಮಾಡಿದರು.

ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಯುದ್ಧ ಘೋಷಣೆಯ ನಂತರ ರಷ್ಯಾ ಗುರುವಾರ ಭೂ, ವಾಯು ಹಾಗೂ  ಸಮುದ್ರ ಮಾರ್ಗದ ಮೂಲಕ ತನ್ನ ಆಕ್ರಮಣವನ್ನು ಆರಂಭಿಸಿತು. ಪ್ರಮುಖ ನಗರಗಳಲ್ಲಿ ಸ್ಫೋಟಗಳು ಮತ್ತು ಗುಂಡಿನ ದಾಳಿಯಿಂದಾಗಿ ಅಂದಾಜು 100,000 ಜನರು ಪಲಾಯನಗೈದಿದ್ದು, ಹತ್ತಾರು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

“ಶತ್ರು ರಾಷ್ಟ್ರ(ರಶ್ಯ) ನನ್ನನ್ನು ನಂಬರ್ ಒನ್ ಗುರಿ ಎಂದು ಗುರುತಿಸಿದೆ. ನನ್ನ ಕುಟುಂಬವು ಎರಡನೇ ಗುರಿಯಾಗಿದೆ. ಅವರು ರಾಷ್ಟ್ರದ ಮುಖ್ಯಸ್ಥನನ್ನು ಮುಗಿಸುವ ಮೂಲಕ ಉಕ್ರೇನ್ ಅನ್ನು ರಾಜಕೀಯವಾಗಿ ನಾಶ ಮಾಡಲು ಬಯಸುತ್ತಾರೆ. ನಾನು ರಾಜಧಾನಿಯಲ್ಲಿ ಉಳಿಯುತ್ತೇನೆ. ನನ್ನ ಕುಟುಂಬವೂ ಉಕ್ರೇನ್‌ನಲ್ಲಿದೆ’’ ಎಂದು ಝೆಲೆನ್ ಸ್ಕಿ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ನಾವು ಏಕಾಂಗಿಯಾಗಿದ್ದೇವೆ: ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ

"ನಮ್ಮ ರಾಷ್ಟ್ರವನ್ನು ರಕ್ಷಿಸಿಕೊಳ್ಳಲು ನಾವು ಏಕಾಂಗಿಯಾಗಿದ್ದೇವೆ.  ರಷ್ಯಾ ವಿರುದ್ದ ಹೋರಾಡಲು ನಮ್ಮೊಂದಿಗೆ ಯಾರು ಸಿದ್ದರಿದ್ದಾರೆ? ನಮ್ಮೊಂದಿಗೆ ಹೋರಾಟಕ್ಕೆ ನಿಲ್ಲುವ ಯಾರನ್ನೂ ನಾನು ನೋಡುತ್ತಿಲ್ಲ. ಉಕ್ರೇನ್ ಗೆ ನ್ಯಾಟೊ ಸದಸ್ಯತ್ವದ ಖಾತರಿ ನೀಡಲು ಯಾರು ಸಿದ್ದರಾಗಿದ್ದಾರೆ? ಎಲ್ಲರೂ ಭಯಪಡುತ್ತಾರೆ'' ಎಂದು ಝೆಲೆನ್ ಸ್ಕಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News