×
Ad

ಬಿಎಸ್‌ಪಿಯ ಆನೆ ಇಡೀ ರಾಜ್ಯದ ಪಡಿತರವನ್ನೇ ಸೇವಿಸಿದೆ: ಆದಿತ್ಯನಾಥ್ ವಾಗ್ದಾಳಿ

Update: 2022-02-25 14:36 IST

ಲಕ್ನೊ: ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ವಿರುದ್ಧ ವಾಗ್ದಾಳಿ ನಡೆಸಿದರು. ಪಕ್ಷದ ಆನೆ ಎಷ್ಟು ದೊಡ್ಡದಾಗಿದೆ ಎಂದರೆ ಅದು ಇಡೀ ರಾಜ್ಯದ ಪಡಿತರವನ್ನು ತಿನ್ನುತ್ತದೆ ಎಂದು ಹೇಳಿದ್ದಾರೆ.

"ಉತ್ತರ ಪ್ರದೇಶ ಚುನಾವಣೆ 2022 ರ ಫಲಿತಾಂಶಗಳು ಮಾರ್ಚ್ 10 ರಂದು ಬರುತ್ತವೆ. ಆದರೆ ಎಲ್ಲಾ ವಿರೋಧ ಪಕ್ಷದ ನಾಯಕರು ಮಾರ್ಚ್ 11 ಕ್ಕೆ ಉತ್ತರಪ್ರದೇಶದಿಂದ ಹೊರಹೋಗಲು ಟಿಕೆಟ್ ಕಾಯ್ದಿರಿಸಿದ್ದಾರೆ ... ಬಿಎಸ್‌ಪಿ ಆನೆಯ ಹೊಟ್ಟೆ ಎಷ್ಟು ದೊಡ್ಡದಾಗಿದೆ ಎಂದರೆ ಇಡೀ ರಾಜ್ಯದ ಪಡಿತರವನ್ನು ಅದು ಸೇವಿಸಿದೆ " ಆದಿತ್ಯನಾಥ್  ಹೇಳಿರುವುದಾಗಿ ANI ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News