ಶಿರೂರು: ಗ್ರೀನ್ ವ್ಯಾಲಿ ಇಂಟರ್‌ನ್ಯಾಶನಲ್ ಸ್ಕೂಲ್ - ಪಿಯು ಕಾಲೇಜಿನಲ್ಲಿ ಘಟಿಕೋತ್ಸವ

Update: 2022-02-26 14:26 GMT

ಶಿರೂರು: ಗ್ರೀನ್ ವ್ಯಾಲಿ ಇಂಟರ್‌ನ್ಯಾಶನಲ್ ಸ್ಕೂಲ್ ಮತ್ತು ಪಿಯು ಕಾಲೇಜಿನಲ್ಲಿ ಶನಿವಾರ 2022ರ ಪಿಯುಸಿ ಮತ್ತು ಗ್ರೇಡ್ ಹತ್ತರ ಐಸಿಎಸ್‌ಇ ತರಗತಿಗಳ ಘಟಿಕೋತ್ಸವ ನಡೆಯಿತು.

ಮುಖ್ಯ ಅತಿಥಿಗಳಾಗಿ ಹಿರಿಯ ಉಪಾಧ್ಯಕ್ಷ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಮುಹಮ್ಮದ್ ಮೀರಾನ್ ಭಾಗವಹಿಸಿದ್ದರು. 

ಹೌಸ್ ಕ್ಯಾಪ್ಟನ್‌ಗಳು ಮತ್ತು ಪ್ರಿಫೆಕ್ಟ್ ಲೀಡರ್‌ಗಳು ಧ್ವಜಗಳನ್ನು ಹಿಡಿದು ಘಟಿಕೋತ್ಸವದ ಸಭಾಂಗಣಕ್ಕೆ ಪೆಜೆಂಟ್ ಅನ್ನು ಮುನ್ನಡೆಸಿದರು. ಇದು ಶಾಲಾ ನಾಯಕರಾಗಿ ತಮ್ಮ ಅಧಿಕಾರಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸಂಕೇತವಾಗಿದೆ.

ಪ್ರಾಂಶುಪಾಲ ಡಾ. ಜಾನ್ ಮ್ಯಾಥ್ಯೂ, ಮುಖ್ಯ ಸಂಯೋಜಕಿ ವಿಲ್ಹೆಲ್ಮಿನಾ ಮ್ಯಾಥ್ಯೂ ಮತ್ತು ಮುಖ್ಯ ಅತಿಥಿಗಳು ಘಟಿಕೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.  ಪ್ರಾಂಶುಪಾಲರು ತಮ್ಮ ಘಟಿಕೋತ್ಸವ ಭಾಷಣದಲ್ಲಿ ವಿದ್ಯಾರ್ಥಿಗಳ ಯಶಸ್ಸಿಗೆ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು ವಿದ್ಯಾರ್ಥಿಗಳು ಜೀವನವನ್ನು ಎದುರಿಸಲು, ತಮ್ಮದೇ ಆದ ನೆಲೆಯನ್ನು ಕಂಡುಕೊಳ್ಳಲು ದೂರದೃಷ್ಟಿಯನ್ನು ಹೊಂದಿರಬೇಕೆಂದು ಎಂದರು. 

ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ ಅವರು, ಗ್ರೀನ್ ವ್ಯಾಲಿಯಲ್ಲಿ ಶ್ರೇಷ್ಠತೆಯ ಸಂಪ್ರದಾಯವನ್ನು ಎತ್ತಿ ಹಿಡಿಯುವಂತೆ ಸಲಹೆ ನೀಡಿದರು. ಮುಖ್ಯ ಅತಿಥಿ ಮಹಮ್ಮದ್ ಮೀರಾನ್ ಮಾತನಾಡಿ, ವಿದ್ಯಾರ್ಥಿಗಳು ಯಾವಾಗಲೂ ವಿವೇಚನೆಯಿಂದ ಸರಿಯಾದ ಮಾರ್ಗದಲ್ಲಿ ಸಾಗಬೇಕು ಮತ್ತು ತಮ್ಮಲ್ಲಿ ನಂಬಿಕೆ ಮತ್ತು ವಿಶ್ವಾಸವನ್ನು ಹೊಂದಿರಬೇಕು ಎಂದರು.

ವಿದ್ಯಾರ್ಥಿಗಳು ಕೇವಲ ಉದ್ಯೋಗಾಕಾಂಕ್ಷಿಗಳಾಗದೆ ಉದ್ಯೋಗ ಒದಗಿಸುವವರು ಮತ್ತು ಉದ್ಯಮಿಗಳಾಗಬೇಕು ಎಂದು ಸಲಹೆ ನೀಡಿದರು.

ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ಮತ್ತು ಸ್ಮರಣಿಕೆಗಳನ್ನು ನೀಡಲಾಯಿತು.  ಪ್ರತಿಭಾನ್ವಿತ ಮತ್ತು ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿಶೇಷ ಪ್ರಶಸ್ತಿಗಳನ್ನು ನೀಡಲಾಯಿತು. ಸಮಾಜ ಸೇವೆಗಾಗಿ ಕರ್ನಾಟಕ ರಾಜ್ಯ ಪುರಸ್ಕೃತರಾದ ಮುಹಮ್ಮದ್ ಮಿರಾನ್ ಅವರಿಗೆ ಗ್ರೀನ್ ವ್ಯಾಲಿ ಇಂಟರ್ನ್ಯಾಷನಲ್ ಸ್ಕೂಲ್ ವತಿಯಿಂದ ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳು ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News