×
Ad

'ಮೀಡಿಯಾ ಒನ್' ಮೇಲಿನ ನಿಷೇಧ ಎತ್ತಿ ಹಿಡಿದ ಕೇರಳ ಹೈಕೋರ್ಟ್

Update: 2022-03-02 10:57 IST

ತಿರುವನಂತಪುರಂ: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ರಾಷ್ಟ್ರೀಯ ಸುರಕ್ಷತೆಯ ಕಾರಣ ನೀಡಿ ಮಲಯಾಳಂ ಸುದ್ದಿ ವಾಹಿನಿ 'ಮೀಡಿಯಾಒನ್' ಮೇಲೆ ಹೇರಿದ್ದ ನಿಷೇಧವನ್ನು ಎತ್ತಿ ಹಿಡಿದು ಇತ್ತೀಚೆಗೆ ಕೇರಳ ಹೈಕೋರ್ಟಿನ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶದ ವಿರುದ್ಧ ಮೀಡಿಯಾಒನ್ ಸಲ್ಲಿಸಿದ್ದ ಅಪೀಲನ್ನು ಹೈಕೋರ್ಟ್ ಇಂದು ವಜಾಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಲಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಮೀಡಿಯಾಒನ್ ಸಂಸ್ಥೆಯ ಪ್ರಸಾರ ಕುರಿತಾದ ಪರವಾನಗಿಯನ್ನು ನವೀಕರಿಸಲು ನಿರಾಕರಿಸಿದ್ದ ಕ್ರಮವನ್ನು ಇಂದು ಎತ್ತಿ ಹಿಡಿದಿದೆ.

ಏಕಸದಸ್ಯ ಪೀಠದ ಆದೇಶದ ವಿರುದ್ಧ ಕೇರಳ ಕಾರ್ಯನಿರತ ಪತ್ರಕರ್ತರ ಸಂಘ ಕೂಡ ಈ ಹಿಂದೆ ಪ್ರತ್ಯೇಕ ಅಪೀಲು ಸಲ್ಲಿಸಿತ್ತು.

ಜನವರಿ 31ರಂದು ಕೇಂದ್ರ ಸಚಿವಾಲಯದ ಕ್ರಮದ ಬೆನ್ನಲ್ಲೇ ಈ ಚಾನೆಲ್‍ನ ಪ್ರಸಾರ ಸ್ಥಗಿತಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News