×
Ad

ಪ್ರತ್ಯೇಕ ಪ್ರಕರಣ: ಸರಕಾರಿ ಶಾಲೆಗಳಿಗೆ ಕಿಡಿಗೇಡಿಗಳಿಂದ ಹಾನಿ

Update: 2022-03-02 21:08 IST

ಉಡುಪಿ, ಮಾ.2: ಪುತ್ತೂರು ಗ್ರಾಮದ ಹನುಮಂತನಗರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ವಡ್ಡರ್ಸೆ ಬನ್ನಾಡಿ ಸರಕಾರಿ ಪ್ರೌಢಶಾಲೆ ಗಳಿಗೆ ಕಿಡಿಗೇಡಿಗಳು ಹಾನಿ ಎಸಗಿರುವ ಘಟನೆ ಫೆ.28ರಿಂದ ಮಾ.2ರ ಮಧ್ಯಾವಧಿಯಲ್ಲಿ ನಡೆದಿದೆ.

ಹನುಮಂತ ನಗರದ ಶಾಲೆಯ ಕಟ್ಟಡದ ಹೆಂಚಿನ ಮಾಡಿಗೆ ದೊಡ್ಡ ದೊಡ್ಡ ಕಲ್ಲುಗಳನ್ನು ಎಸೆದು, ಸುಮಾರು 100 ಹಂಚುಗಳನ್ನು ಹಾನಿಗೊಳಿಸಿದ್ದಾರೆ. ಇದರಿಂದ ಸುಮಾರು 25,000ರೂ. ನಷ್ಟ ಉಂಟಾಗಿರುವ ಬಗ್ಗೆ ಅಂದಾಜಿಸಲಾಗಿದೆ. ಈ ಬಗ್ಗೆ ಪ್ರಭಾರ ಮುಖ್ಯ ಶಿಕ್ಷಕಿ ರಮಣಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅದೇ ರೀತಿ ವಡ್ಡರ್ಸೆ ಬನ್ನಾಡಿ ಸರಕಾರಿ ಪ್ರೌಢಶಾಲೆಗೆ ಅಕ್ರಮ ಪ್ರವೇಶ ಮಾಡಿದ ಕಿಡಿ ಗೇಡಿಗಳು, ಶಾಲೆಯ ಕಿಟಕಿಗೆ ಅಳವಡಿಸಿದ 5 ಕಿಟಕಿಯ ಗ್ಲಾಸ್, ನೀರು ಪೂರೈಕೆಯ ಪೈಪ್ ಮತ್ತು ಶೌಚಾಲಯಕ್ಕೆ ಅಳವಡಿಸಿದ್ದ 5 ಕಿಟಕಿಯ ಗ್ಲಾಸ್, ಶಾಲೆಯ ರೂಫ್ ಮೇಲೆ ಅಳವಡಿಸಿದ ನೀರು ಸಂಗ್ರಹಣಾ ಟ್ಯಾಂಕನ್ನು ಒಡೆದು ಹಾಕಿದ್ದಾರೆ. ಇದರಿಂದ ಸುಮಾರು 50,000 ರೂ. ನಷ್ಟ ಉಂಟಾಗಿದೆ ಎಂದು ದೂರಲಾಗಿದೆ.

ಈ ಬಗ್ಗೆ ಮುಖ್ಯ ಶಿಕ್ಷಕ ಆನಂದ ಶೆಟ್ಟಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News