ಎಂಬಿಬಿಎಸ್ ಕಲಿಯಲು ಭಾರತೀಯ ವಿದ್ಯಾರ್ಥಿಗಳು ವಿದೇಶಗಳಿಗೇಕೆ ಹೋಗುತ್ತಾರೆ?
ಯುದ್ಧಗ್ರಸ್ತ ಉಕ್ರೇನ್ನಲ್ಲಿ ಅತಂತ್ರರಾಗಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಸ್ವದೇಶಕ್ಕೆ ತೆರವುಗೊಳ್ಳಲು ಕಾಯುತ್ತಿರುವಾಗ ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್, ಚೀನಾ,ರಷ್ಯ,ಜಾರ್ಜಿಯಾ ಮತ್ತು ಫಿಲಿಪ್ಪೀನ್ಸ್ ನಂತಹ ದೇಶಗಳ ಜನಪ್ರಿಯತೆಯು ಪ್ರಮುಖ ಚರ್ಚೆಯ ವಿಷಯವಾಗಿ ಹೊರಹೊಮ್ಮಿದೆ. ಫೆ.26ರಂದು ಆರೋಗ್ಯ ಕ್ಷೇತ್ರಕ್ಕಾಗಿ ಕೇಂದ್ರ ಮುಂಗಡಪತ್ರದಲ್ಲಿಯ ಪ್ರಕಟಣೆಗಳ ಕುರಿತು ವೆಬಿನಾರ್ ಅನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರು ಈ ವಿದ್ಯಮಾನವನ್ನು ಪ್ರಸ್ತಾಪಿಸಿ,ಭಾರತೀಯ ವಿದ್ಯಾರ್ಥಿಗಳು,ವಿಶೇಷವಾಗಿ ವೈದ್ಯಕೀಯ ವ್ಯಾಸಂಗಕ್ಕಾಗಿ ಸಣ್ಣ ದೇಶಗಳಿಗೆ ತೆರಳುತ್ತಿದ್ದಾರೆ ಎಂದು ಬೆಟ್ಟು ಮಾಡಿದ್ದರು. ದೊಡ್ಡ ರೀತಿಯಲ್ಲಿ ವೈದ್ಯಕೀಯ ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸುವಂತೆ ಖಾಸಗಿ ಕ್ಷೇತ್ರವನ್ನು ಅವರು ಆಗ್ರಹಿಸಿದ್ದರು.
ಮೋದಿಯವರು ಉಕ್ರೇನ್ನಲ್ಲಿರುವ ವಿದ್ಯಾರ್ಥಿಗಳನ್ನು ನಿರ್ದಿಷ್ಟವಾಗಿ ಪ್ರಸ್ತಾಪಿಸಿರದಿದ್ದರೂ ಆ ದೇಶದ ಶಿಕ್ಷಣ ಮತ್ತು ವಿಜ್ಞಾನ ಸಚಿವಾಲಯದ ಪ್ರಕಾರ ಅದು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳನ್ನು ಹೊಂದಿರುವ ಯುರೋಪ್ ನ ನಾಲ್ಕನೇ ದೇಶವಾಗಿದೆ. ತೆರವು ಪ್ರಯತ್ನಗಳು ಆರಂಭಗೊಳ್ಳುವ ಮುನ್ನ ಉಕ್ರೇನ್ನಲ್ಲಿ ಸುಮಾರು 18,095 ಭಾರತೀಯ ವಿದ್ಯಾರ್ಥಿಗಳಿದ್ದರು ಮತ್ತು 2020ರಲ್ಲಿ ಆ ದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದೇಶಿಯರಲ್ಲಿ ಶೇ.24ರಷ್ಟು ಭಾರತೀಯ ವಿದ್ಯಾರ್ಥಿಗಳಾಗಿದ್ದರು. ಹಲವಾರು ವಿದ್ಯಾರ್ಥಿಗಳು ಈಗಲೂ ಉಕ್ರೇನ್ನಲ್ಲಿ ಅತಂತ್ರರಾಗಿರುವಾಗ ಅಲ್ಲಿಂದ ಮತ್ತು ಚೀನಾದಿಂದ ಭಾರತಕ್ಕೆ ಮರಳಿರುವ ಸಾವಿರಾರು ವಿದ್ಯಾರ್ಥಿಗಳು ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದ್ದಾರೆ.
ಸಾವಿರಾರು ವಿದ್ಯಾರ್ಥಿಗಳು ಎಂಬಿಬಿಎಸ್ ಕಲಿಯಲು ವಿದೇಶಗಳಿಗೆ ಹೋಗುತ್ತಿರುವುದಕ್ಕೆ ಕಾರಣ ತುಂಬ ಸರಳವಾಗಿದೆ ಎನ್ನುತ್ತಾರೆ ತಜ್ಞರು;ಭಾರತದಲ್ಲಿ ವೈದ್ಯಕೀಯ ಸೀಟುಗಳ ಕೊರತೆ,ಜೊತೆಗೆ ಭಾರತದಲ್ಲಿಯ ಖಾಸಗಿ ಕಾಲೇಜುಗಳಿಗೆ ಹೋಲಿಸಿದರೆ ಉಕ್ರೇನ್ ಮತ್ತು ಇತರ ದೇಶಗಳಲ್ಲಿಯ ಕಡಿಮೆ ಶುಲ್ಕಗಳು.
ಭಾರತದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಅವಕಾಶಗಳ ಕೊರತೆ
ಆರೋಗ್ಯ ಸಚಿವಾಲಯದ ಪ್ರಕಾರ 2021, ಡಿಸೆಂಬರ್ ನಲ್ಲಿ ಇದ್ದಂತೆ ಭಾರತದಲ್ಲಿಯ ವೈದ್ಯಕೀಯ ಕಾಲೇಜುಗಳಲ್ಲಿ 88,120 ಎಂಬಿಬಿಎಸ್ ಸೀಟುಗಳಿದ್ದವು. 2021ರಲ್ಲಿ 15.44 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ನೀಟ್-ಯುಜಿ ಪರೀಕ್ಷೆಗೆ ಹಾಜರಾಗಿದ್ದರು. ಕೆಲವು ದೇಶಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ನೀಟ್-ಯುಜಿಯಲ್ಲಿ ತೇರ್ಗಡೆಯಾಗುವುದು ಅಗತ್ಯವಾಗಿದೆ. ಕಳೆದ ವರ್ಷ ಸುಮಾರು 8.70 ಲ.ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದರು. ಅಂದರೆ ಭಾರತದಲ್ಲಿ ಎಂಬಿಬಿಎಸ್ಗೆ ಪ್ರವೇಶ ಪಡೆಯಲು ಶೇ.10ರಷ್ಟು ಅರ್ಹ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿತ್ತು.
ದೇಶದಲ್ಲಿ ಎಂಬಿಬಿಎಸ್ ಸೀಟುಗಳಿಗೆ ಬೇಡಿಕೆ ಮತ್ತು ಲಭ್ಯತೆಯ ನಡುವಿನ ಅಗಾಧ ಅಂತರವನ್ನು ಬೆಟ್ಟು ಮಾಡಿದ ಶಿಕ್ಷಣ ತಜ್ಞ ರಾಮಚಂದ್ರನ್ ಕೃಷ್,ಕೆಲವು ಅಭ್ಯರ್ಥಿಗಳು ಪೋಷಕರ ಒತ್ತಡದಿಂದಾಗಿ ಪರೀಕ್ಷೆ ಬರೆಯುತ್ತಿದ್ದಾರೆ ಎಂದಿಟ್ಟುಕೊಂಡರೂ ಮತ್ತು ಕೇವಲ ಐದು ಲ.ವಿದ್ಯಾರ್ಥಿಗಳು ನಿಜಕ್ಕೂ ಎಂಬಿಬಿಎಸ್ ಮಾಡಲು ಬಯಸುತ್ತಿದ್ದಾರೆ ಎಂದಿಟ್ಟುಕೊಂಡರೂ ಕೊರತೆ ಅಗಾಧ ಮಟ್ಟದಲ್ಲಿಯೇ ಇದೆ ಎಂದರು.
ಭಾರತದಲ್ಲಿ 284 ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 43,310 ಮತ್ತು 269 ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 41,065 ಎಂಬಿಬಿಎಸ್ ಸೀಟುಗಳಿವೆ. ಅಂದರೆ ಈಗಾಗಲೇ ಅಲ್ಪ ಸಂಖ್ಯೆಯಲ್ಲಿರುವ ಸೀಟುಗಳ ಪೈಕಿ ಅರ್ಧದಷ್ಟು ಮಾತ್ರ ಕೈಗೆಟಕುವ ಶುಲ್ಕಗಳನ್ನು ವಿಧಿಸುವ ಸರಕಾರಿ ಕಾಲೇಜುಗಳಲ್ಲಿವೆ. ಭಾರತದಲ್ಲಿಯ ಖಾಸಗಿ ಕಾಲೇಜುಗಳಿಗೆ ಹೋಲಿಸಿದರೆ ಪ್ರಧಾನಿಯವರು ಪ್ರಸ್ತಾಪಿಸಿದ್ದ ‘ಸಣ್ಣ ದೇಶಗಳಲ್ಲಿ ’ ಎಂಬಿಬಿಎಸ್ ವ್ಯಾಸಂಗದ ವೆಚ್ಚ ತುಂಬ ಕಡಿಮೆಯಾಗಿದೆ.
ಉಕ್ರೇನ್ ಮತ್ತು ರಷ್ಯದಂತಹ ದೇಶಗಳಲ್ಲಿ ಸಂಪೂರ್ಣ ಎಂಬಿಬಿಎಸ್ ಶಿಕ್ಷಣದ ವೆಚ್ಚ ಭಾರತದಲ್ಲಿಯ ಖಾಸಗಿ ಕಾಲೇಜುಗಳಿಗೆ ಹೋಲಿಸಿದರೆ ಮೂರನೇ ಒಂದರಷ್ಟಾಗುತ್ತದೆ ಎನ್ನುತ್ತಾರೆ ರಾಮಚಂದ್ರನ್.
ಭಾರತದಲ್ಲಿ ಖಾಸಗಿ ಕಾಲೇಜುಗಳಲ್ಲಿ ಎಂಬಿಬಿಎಸ್ ಓದಲು ನಾವು ವಾರ್ಷಿಕ 10ರಿಂದ 15 ಲ.ರೂ.ಗಳನ್ನು ವೆಚ್ಚ ಮಾಡಬೇಕಾಗುತ್ತದೆ,ಇಲ್ಲಿ ವಾರ್ಷಿಕ ವೆಚ್ಚ ಕೇವಲ 3ರಿಂದ 4 ಲ.ರೂ.ಮಾತ್ರ ಎಂದು ಉಕ್ರೇನ್ನ ಇವಾನೊ ಫ್ರಾಂಕಿವಸ್ಕ್ ನ್ಯಾಶನಲ್ ಮೆಡಿಕಲ್ ವಿವಿಯಲ್ಲಿ ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿರುವ ಓಂಕಾರ ಜಿಲಾ ಹೇಳಿದರು.
ಅಲ್ಲದೆ ಕೆಲವೊಮ್ಮೆ ಭಾರತದ ಖಾಸಗಿ ಕಾಲೇಜುಗಳಲ್ಲಿಯೂ ಶಿಕ್ಷಣದ ಗುಣಮಟ್ಟ ಉತ್ತಮವಿರುವುದಿಲ್ಲ ಮತ್ತು ಇದೇ ಅಥವಾ ಇನ್ನಷ್ಟು ಒಳ್ಳೆಯ ಗುಣಮಟ್ಟದ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ವಿದೇಶಗಳಲ್ಲಿ ತುಲನಾತ್ಮಕವಾಗಿ ಅಗ್ಗ ಶುಲ್ಕಗಳ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ರಾಮಚಂದ್ರನ್ ಹೇಳಿದರು.
ಈ ವಿದ್ಯಾರ್ಥಿಗಳು ಭಾರತಕ್ಕೆ ಮರಳಿದರೂ ಇಲ್ಲಿ ವೈದ್ಯಕೀಯ ವೃತ್ತಿಯನ್ನು ನಡೆಸಲು ಪರವಾನಿಗೆಗಾಗಿ ವಿದೇಶಿ ಮೆಡಿಕಲ್ ಪದವೀಧರರ ಪರೀಕ್ಷೆ (ಎಫ್ಎಂಜಿಇ)ಯಲ್ಲಿ ತೇರ್ಗಡೆಗೊಳ್ಳುವುದು ಅಗತ್ಯವಾಗಿದೆ. ಎಫ್ಎಂಜಿಇ ಬದಲು ಈಗ ನ್ಯಾಷನಲ್ ಎಕ್ಸಿಟ್ ಟೆಸ್ಟ್ನ್ನು ನಡೆಸಲಾಗುತ್ತಿದೆ ಮತ್ತು ಇದು ಶೀಘ್ರವೇ ಭಾರತದಲ್ಲಿ ಎಂಬಿಬಿಎಸ್ ಓದಿರುವ ವಿದ್ಯಾರ್ಥಿಗಳಿಗೆ ಅಂತಿಮ ಅರ್ಹತಾ ಪರೀಕ್ಷೆಯಾಗುವ ಮತ್ತು ನೀಟ್-ಪಿಜಿ ಪರೀಕ್ಷೆಯ ಬದಲು ಇದೇ ಖಾಯಂ ಆಗುವ ಸಾಧ್ಯತೆಯಿದೆ.
ಉಕ್ರೇನ್ ಬಿಕ್ಕಟ್ಟಿನ ನಡುವೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿಯವರು,ವಿದೇಶಗಳಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳು ಭಾರತದ ಅರ್ಹತಾ ಪರೀಕ್ಷೆಗಳಲ್ಲಿ ತೇರ್ಗಡೆಗೊಂಡಿರುವುದಿಲ್ಲ ಎಂದು ಹೇಳಿದ್ದು,ಇದನ್ನು ಪ್ರಗತಿಪರ ವೈದ್ಯರು ಮತ್ತು ವಿಜ್ಞಾನಿಗಳ ವೇದಿಕೆ (ಪಿಎಂಎಸ್ಎಫ್) ಟೀಕಿಸಿದೆ.
ಉಕ್ರೇನ್ನಲ್ಲಿ ಯದ್ಧದ ಭೀಕರತೆಯನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಓದುವ ಬದಲು ನೀವು ‘ಸಣ್ಣ ದೇಶಗಳಿಗೆ ’ಹೋಗುವುದು ಏಕೆ ಎಂಬಂತಹ ಸಂವೇದನಾಹೀನ ಮತ್ತು ಅಸಮರ್ಪಕ ಪ್ರಶ್ನೆಗಳನ್ನು ಕೇಳಲಾಗುತ್ತಿದೆ ಎಂದು ಪಿಎಂಎಸ್ಎಫ್ ತರಾಟೆಗೆತ್ತಿಕೊಂಡಿದೆ.
ಭಾರತದಲ್ಲಿ ಸೀಮಿತ ಸರಕಾರಿ ಎಂಬಿಬಿಎಸ್ ಸೀಟುಗಳ ಸಂಖ್ಯೆ ಮತ್ತು ಅಗ್ಗದಲ್ಲಿ ವೈದ್ಯಕೀಯ ಶಿಕ್ಷಣದ ಕೊರತೆಯಿಂದಾಗಿ ಸಾವಿರಾರು ಎಂಬಿಬಿಎಸ್ ಆಕಾಂಕ್ಷಿಗಳು ಪೂರ್ವ ಯುರೋಪ,ಆಗ್ನೇಯ ಏಷ್ಯ ಮತ್ತು ಓಶನಿಯಾಗಳಲ್ಲಿ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶಗಳಿಗೆ ವ್ಯವಸ್ಥೆ ಮಾಡುವ ಏಜೆನ್ಸಿಗಳ ನೆರವು ಪಡೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಅದು ಮಂಗಳವಾರ ಹೇಳಿಕೆಯೊಂದರಲ್ಲಿ ಬೆಟ್ಟು ಮಾಡಿದೆ.
ಕೊರತೆಯನ್ನು ನೀಗಿಸಲು ಖಾಸಗಿ ಕ್ಷೇತ್ರಕ್ಕೆ ಸಾಧ್ಯವೇ?
ವಿದೇಶಗಳಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ತಪ್ಪು ಹುಡುಕುವ ಮೂಲಕ ಭಾರತ ಸರಕಾರವು ದೇಶದಲ್ಲಿಯ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆ ಕ್ಷೇತ್ರದ ಅತಿಯಾದ ವ್ಯಾಪಾರೀಕರಣದ ಬಗ್ಗೆ ಅಜ್ಞಾನವನ್ನು ಪ್ರದರ್ಶಿಸುತ್ತಿದೆ ಎಂದು ಪಿಎಂಎಸ್ಎಫ್ ಟೀಕಿಸಿದೆ.
ಭಾರತದಲ್ಲಿಯ ಪ್ರತಿಯೊಬ್ಬ ವೈದ್ಯಕೀಯ ಶಿಕ್ಷಣದ ಆಕಾಂಕ್ಷಿಗೆ ಅವಕಾಶವನ್ನೊದಗಿಸಲು ಮತ್ತು ವೈದ್ಯರು ಹಾಗೂ ರೋಗಿಗಳ ನಡುವಿನ ಅಗತ್ಯ ಅನುಪಾತವನ್ನು ಸಾಧಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ)ವು ಎಂಬಿಬಿಎಸ್ ಸೀಟುಗಳ ಕೊರತೆಯನ್ನು ಗಂಭೀರವಾಗಿ ತೆಗೆದುಕೊಂಡರೂ ಅದು ಮುಂದಿನ ಕೆಲವು ವರ್ಷಗಳ ಕಾಲ ಪ್ರತಿ ವರ್ಷವೂ ಸುಮಾರು 30,000 ಎಂಬಿಬಿಎಸ್ ಸೀಟುಗಳನ್ನು ಹೆಚ್ಚಿಸಬೇಕಾಗುತ್ತದೆ ಮತ್ತು ಅದಕ್ಕೆ ಅಗತ್ಯ ಹಣಕಾಸು ಲಭ್ಯವಾಗಿಸಬೇಕಾಗುತ್ತದೆ ಎಂದು ಹೇಳಿದ ರಾಮಚಂದ್ರನ್,ಪ್ರಸಕ್ತ ಶಿಕ್ಞಣ ವ್ಯವಸ್ಥೆಗೆ ಪರ್ಯಾಯಗಳನ್ನು ಕಂಡು ಕೊಳ್ಳಲೇಬೇಕಿದೆ. ಸರಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಕೆಲವು ವೈದ್ಯಕೀಯ ಕಾಲೇಜುಗಳನ್ನು ಆರಂಭಿಸುವುದನ್ನು ಎನ್ಎಂಸಿಯು ಪರಿಗಣಿಸಬಹುದಾಗಿದೆ. ಸರಕಾರವು ಕಾಲೇಜುಗಳನ್ನು ಆರಂಭಿಸುವಂತೆ ದೊಡ್ಡ ಆಸ್ಪತ್ರೆ ಸಮೂಹಗಳಿಗೆ ಸೂಚಿಸಬಹುದು ಮತ್ತು ಅವುಗಳಿಗೆ ಉತ್ತೇಜನ ಕ್ರಮಗಳನ್ನು ಜಾರಿಗೊಳಿಸಬಹುದು,ಇದೇ ವೇಳೆ ಶುಲ್ಕಗಳು ಕೈಗೆಟಕುವ ಮಟ್ಟದಲ್ಲಿರುವುದು ಅಗತ್ಯವಾಗುತ್ತದೆ ಎಂದರು.