×
Ad

ಉಳ್ಳಾಲ ಉರೂಸಿನ ಅಚ್ಚುಕಟ್ಟು, ಆತಿಥ್ಯ ದೇಶಕ್ಕೆ ಮಾದರಿ: ನಜೀಬ್ ಮೌಲವಿ

Update: 2022-03-02 23:01 IST

ಉಳ್ಳಾಲ: ಖುತ್ಬುಝಮಾನ್ ಸೈಯ್ಯದ್ ಮದನಿ ತಂಙಳ್ ರ ಆಧ್ಯಾತ್ಮಿಕ ಸಾಮರ್ಥ್ಯ ಇಸ್ಲಾಮಿ ವಿದ್ವಾಂಸರ ಪ್ರಶಂಸೆಗೆ ಪಾತ್ರವಾಗಿರುವುದರಿಂದ ಸೈಯ್ಯದ್ ಮದನಿ ತಂಙಳ್ ರ ಪ್ರಸಿದ್ಧಿ ಲೋಕವ್ಯಾಪಿಯಾದವು. ಸೈಯ್ಯದ್ ಮದನಿಯವರ ಹೆಸರಿನಲ್ಲಿ ಆಚರಿಸಲ್ಪಡುವ ಉಳ್ಳಾಲ ಉರೂಸ್ ನಿರ್ವಹಣೆಯ ಅಚ್ಚು ಕಟ್ಟು ಮತ್ತು ಆತಿಥ್ಯ ದೇಶಕ್ಕೇ ಮಾದರಿ ಎಂದು ಖ್ಯಾತ ಇಸ್ಲಾಮಿ ಚಿಂತಕ ಮೌಲಾನ ನಜೀಬ್ ಉಸ್ತಾದ್ ಹೇಳಿದರು.

ಅವರು ಉಳ್ಳಾಲ ಉರೂಸ್ ಪ್ರಯುಕ್ತ ಏರ್ಪಡಿಸಿದ ಧಾರ್ಮಿಕ ಪ್ರವಚನ ಕಾರ್ಯ ಕ್ರಮದಲ್ಲಿ ದುಆ ನೆರವೇರಿಸಿ ಮುಖ್ಯ ಭಾಷಣ ನಡೆಸಿದರು. ಕಾರ್ಯ ಕ್ರಮವನ್ನು ದುಗ್ಗಲಡ್ಕ ಝೈನುಲ್ ಆಬಿದ್ ತಂಙಳ್ ಉದ್ಘಾಟಿಸಿದರು.

ಅಬ್ದುಸಲೀಮ್ ವಾಫಿ ಅಂಬಲಕಣ್ಣಿ ಉಸ್ತಾದ್  ಮಾತನಾಡಿ, ಮತ ಧರ್ಮದ ಬಗೆಗಿನ ಭಿನ್ನಾಭಿಪ್ರಾಯಗಳನ್ನು ನಮ್ಮ ಪೂರ್ವಜರಾದ ಗುರುವರ್ಯ ಚಿಂತನೆ ಮತ್ತು ಮಾರ್ಗದರ್ಶನ ದಂತೆ ನಡೆಯ ಬೇಕಿದೆ ಎಂದರು.

ಈ ಸಂದರ್ಭದಲ್ಲಿ ಉಳ್ಳಾಲ ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ದಯಾನಂದ, ಬಿ.  ಉಳ್ಳಾಲ ನಗರ ಸಮೂದಾಯ ಆರೋಗ್ಯ ಕೇಂದ್ರ ಮುಖ್ಯ ವೈದ್ಯಾಧಿಕಾರಿ ಡಾ. ವಿದ್ಯಾ ಸಾಗರ್, ಅಬೂಶಾಲಿ ಮದನಿ ಆಲಡ್ಕ, ಕವಿ- ಗಾಯಕ ಬಶೀರ್ ಅಹ್ಮದ್ ಕಿನ್ಯ ರವರನ್ನು ಉಳ್ಳಾಲ ದರ್ಗಾ ಆಡಳಿತ ಸಮಿತಿಯ ಪರವಾಗಿ ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ರವರು ಸನ್ಮಾನಿಸಿದರು.

ವೇದಿಕೆಯಲ್ಲಿ ಶೈಖುನಾ ಉಸ್ಮಾನ್ ಫೈಝಿ, ಇಮಾಮ್ ಅನ್ವರ್ ಅಲಿ ದಾರಿಮಿ,  ಉಳ್ಳಾಲ ದರ್ಗಾ ಉಪಾಧ್ಯಕ್ಷ ಯು.ಕೆ.ಮೋನು, ಲೆಕ್ಕ ಪರಿಶೋಧಕ ಯು.ಟಿ.ಇಲ್ಯಾಸ್,   ಅಮೀರ್ ಹಾಜಿ, ಉಸ್ಮಾನ್ ಹಾಜಿ ಏರ್ ಇಂಡಿಯಾ, ಆಸ್ಕೋ ಅಬ್ಬು ಹಾಜಿ, ಅಬ್ದುಲ್ ರಹಿಮಾನ್ ಹಾಜಿ ಆಸ್ಕೋ, ಇಬ್ರಾಹಿಂ ಮದನಿ,  ಮುಸ್ತಫ ಅಬ್ದುಲ್ಲ,  ಎ.ಕೆ.ಮೊಯ್ದಿನ್ ಹಾಜಿ,  ಯೂಸುಫ್ ಉಳ್ಳಾಲ್, ಅಬ್ದುಲ್ ಜಬ್ಬಾರ್, ಆಸಿಫ್ ಅಬ್ದುಲ್ಲ, ಇಬ್ರಾಹಿಂ ಅಹ್ಸನಿ, ಆದಂ ಫೈಝಿ, ಅಹ್ಮದ್ ಬಾವ ಕೋಡಿ, ಹಮೀದ್ ಕೋಡಿ ಜಮಾಲ್ ಬಾರ್ಲಿ, ಅಲ್ತಾಫ್ ಉಳ್ಳಾಲ್, ಅಬ್ದುಲ್ ರಹಿಮಾನ್, ಮಜೀದ್ ಫೈಝಿ, ಅಬ್ದುಲ್ಲ ಮದನಿ  ಉಪಸ್ಥಿತರಿದ್ದರು.

ಫಾರೂಕ್ ಉಳ್ಳಾಲ್  ಸ್ವಾಗತಿಸಿ , ಕಾರ್ಯಕ್ರಮ ನಿರೂಪಿಸಿದರು. ಸಲಾಂ ಮದನಿ ಮತ್ತು ಯೂಸುಫ್ ಸಖಾಫಿ ಖಿಲಿರಿಯ, ಉವೈಸ್ ಮದನಿ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News