24 ಗಂಟೆಗಳಲ್ಲಿ 3,000 ಭಾರತೀಯರ ಸ್ಥಳಾಂತರ: ಕೇಂದ್ರ ಸರಕಾರ

Update: 2022-03-03 18:50 GMT

ಹೊಸದಿಲ್ಲಿ, ಮಾ. 4: ಯುದ್ಧ ಪೀಡಿತ ಉಕ್ರೇನ್‌ನಿಂದ ಕಳೆದ 24 ಗಂಟೆಗಳಲ್ಲಿ 15ಕ್ಕೂ ಅಧಿಕ ವಿಮಾನಗಳ ಮೂಲಕ 3,000 ಭಾರತೀಯರನ್ನು ತೆರವುಗೊಳಿಸಲಾಗಿದೆ ಎಂದು ಕೇಂದ್ರ ಸರಕಾರ ಗುರುವಾರ ಹೇಳಿದೆ.

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಕೇಂದ್ರ ಸರಕಾರ ನಿಧಾನವಾಗಿ ತೆರವುಗೊಳಿಸುತ್ತಿದೆ ಎಂಬ ಪ್ರತಿಪಕ್ಷಗಳ ಟೀಕೆಯ ನಡುವೆ ಕೇಂದ್ರ ಸರಕಾರ ಈ ಹೇಳಿಕೆ ನೀಡಿದೆ.
 ‘ಆಪರೇಷನ್ ಗಂಗಾ’ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳ ತೆರವು ಕಾರ್ಯಾಚರಣೆಗೆ ಹೆಚ್ಚಿನ ವಿಮಾನಗಳನ್ನು ನಿಗದಿಪಡಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
‘‘ನಮ್ಮ ಮೊದಲ ಸಲಹೆ ಬಿಡುಗಡೆ ಮಾಡಿದ ಬಳಿಕ ಇದುವರೆಗೆ ಒಟ್ಟು 18 ಸಾವಿರ ಭಾರತೀಯ ಪ್ರಜೆಗಳು ಉಕ್ರೇನ್‌ನಿಂದ ಹಿಂದಿರುಗಿದ್ದಾರೆ.

ಆಪರೇಷನ್ ಗಂಗಾ ಕಾರ್ಯಕ್ರಮದ ಅಡಿಯಲ್ಲಿ 30 ವಿಮಾನಗಳಲ್ಲಿ ಇದುವರೆಗೆ 6,400 ಭಾರತೀಯರನ್ನು ಹಿಂದೆ ಕರೆ ತರಲಾಗಿದೆ. ಮುಂದಿನ 24 ಗಂಟೆಗಳಲ್ಲಿ 18 ವಿಮಾನಗಳ ಕಾರ್ಯಾಚರಣೆ ನಿಗದಿಪಡಿಸಲಾಗಿದೆ’’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News