ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ರಾಡ್ ಮಾರ್ಷ್ ನಿಧನ

Update: 2022-03-04 15:01 GMT
 Photo: IANS

ಸಿಡ್ನಿ: ಆಸ್ಟ್ರೇಲಿಯಾದ ಕ್ರಿಕೆಟ್  ದಿಗ್ಗಜ ರಾಡ್ ಮಾರ್ಷ್(74 ವರ್ಷ) ಶುಕ್ರವಾರ ಬೆಳಿಗ್ಗೆ ಅಡಿಲೇಡ್ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಅವರ ಕುಟುಂಬ ಸದಸ್ಯರು ದೃಢಪಡಿಸಿದ್ದಾರೆ.

74 ವರ್ಷ ವಯಸ್ಸಿನ ಮಾರ್ಷ್ ಆಸ್ಟ್ರೇಲಿಯದ ಪರ 96 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ನಿವೃತ್ತಿಯ ನಂತರ ದೀರ್ಘಕಾಲ ರಾಷ್ಟ್ರೀಯ ಆಯ್ಕೆಗಾರರಾಗಿದ್ದರು.  ಕ್ರಿಕೆಟ್ ಗಾಗಿ ಸುಮಾರು 50 ವರ್ಷ ಸೇವೆ ಸಲ್ಲಿಸಿದ್ದರು.

1947ರಲ್ಲಿ ಪರ್ತ್‌ನಲ್ಲಿ ಜನಿಸಿದ್ದ ಮಾರ್ಷ್ 1970 ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಚೊಚ್ಚಲ ಅಂತರ್ ರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. 1984 ರಲ್ಲಿ ನಿವೃತ್ತಿಯಾದರು.

'ಐರನ್ ಗ್ಲೋವ್ಸ್' ಎಂಬ ಅಡ್ಡಹೆಸರಿನಿಂದ ಖ್ಯಾತರಾಗಿದ್ದ ಮಾರ್ಷ್ 92 ಏಕದಿನ ಪಂದ್ಯಗಳನ್ನು ಆಡಿದ್ದರು. 1982 ರಲ್ಲಿ ಪಾಕಿಸ್ತಾನದ ವಿರುದ್ಧ ಟೆಸ್ಟ್  ಶತಕವನ್ನು ಗಳಿಸಿದ ಆಸ್ಟ್ರೇಲಿಯದ ಮೊದಲ  ವಿಕೆಟ್ ಕೀಪರ್ ಆಗಿದ್ದರು.

ವೃತ್ತಿಜೀವನದ ನಂತರ  ಅವರು ಆಸ್ಟ್ರೇಲಿಯನ್ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ ಕ್ರಿಕೆಟ್ ನೊಂದಿಗೆ  ನಿಕಟ ಸಂಪರ್ಕದಲ್ಲಿದ್ದರು. ಆಯ್ಕೆ ಸಮಿತಿಯ ಅಧ್ಯಕ್ಷರಾಗುವ ಮೊದಲು ರಿಕಿ ಪಾಂಟಿಂಗ್, ಆಡಮ್ ಗಿಲ್‌ಕ್ರಿಸ್ಟ್ ಹಾಗೂ  ಜಸ್ಟಿನ್ ಲ್ಯಾಂಗರ್ ಸೇರಿದಂತೆ ಡಝನ್ ಗಟ್ಟಲೆ ಆಟಗಾರರನ್ನು ಬೆಳೆಸಲು ಸಹಾಯ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News